ಬೆಂಗಳೂರು,ಡಿ.3- ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರು ಮಾಡಿರುವ ಫೆಲಿಸಿಟಿ ಅಡೋಬ್ ಎಲ್ ಎಲ್ ಪಿ ಇತ್ತೀಚೆಗೆ ಮುಕ್ತಾಯಗೊಂಡ ರಿಯಾಲ್ಟಿ ಪ್ಲಸ್ ಕಾನ್ಕ್ಲೇವ್ ಮತ್ತು ಎಕ್ಸಲೆನ್ಸ್ ಅವಾಡ್ರ್ಸ್ – ಸೌತ್ 2018 ರ 10 ನೇ ಆವೃತ್ತಿಯಲ್ಲಿ, ಎರಡು ಗೌರವಗಳನ್ನುಮುಡಿಗೇರಿಸಿಕೊಂಡಿದೆ.
ವರ್ಷದ ಕಡಿಮೆ ವೆಚ್ಚದ ವಸತಿ ಯೋಜನೆ ಸ್ವರ್ಣ ಗೃಹಾ I ಮತ್ತು ಅದರ ಯುವ ಮತ್ತು ಕ್ರಿಯಾತ್ಮಕ ಡೆವಲಪರ್ ಸಂಸ್ಥಾಪಕ ಮತ್ತು ನಿರ್ದೇಶಕ, ಪ್ರಣವ್ ಶರ್ಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕಡಿಮೆ ವೆಚ್ಚದ ಉತ್ತಮ ವಸತಿ ಪ್ರಶಸ್ತಿಯನ್ನು ಪಡೆದ ಬಳಿಕ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕ ಪ್ರೀನಾಂದ್ ಪ್ರೇಮಚಂದ್ರನ್, ರಿಯಲ್ ಎಸ್ಟೇಟ್ ಎಂಬುದು ಸಹಜವಾದ ಒಂದು ವ್ಯವಹಾರವಾಗಿದೆ, ಆದರೆ ನಾವು ಮನೆಗಳನ್ನು ಸೃಷ್ಟಿಸುತ್ತಿಲ್ಲ ಬದಲಾಗಿ ಜನರಿಗೆ ವಾಸಸ್ಥಳವನ್ನು ಒದಗಿಸುತ್ತಿದ್ದೇವೆ. ಅದು ಎಲ್ಲಾ ವರ್ಗದ ಮಂದಿಗೆ, ಪ್ರತಿದಿನ ಮರಳಿ ಬರುವ ನೆಲಯಾಗಬೇಕು. ನಾವು ಸ್ವೀಕರಿಸಿದ ಪ್ರಶಸ್ತಿ ನಾವು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿವೆ ಎಂದು ನಮಗೆ ತೋರಿಸುವ ಪ್ರೇರಣಾ ಶಕ್ತಿಯಾಗಿದೆ ಎಂದರು.
ವರ್ಷದ ಎಮರ್ಜಿಂಗ್ ಡೆವೆಲಪರ್ ಪ್ರಶಸ್ತಿಯನ್ನು ಪಡೆದ, ಫೆಲಿಸಿಟಿ ಅಡೋಬೆ ಸ್ಥಾಪಕ ಮತ್ತು ನಿರ್ದೇಶಕ ಪ್ರಣವ್ ಶರ್ಮಾ, ನಾನು ಕಂಪನಿಯ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಹೆಮ್ಮೆ ಪಡುತ್ತೇನೆ. ಈಗ ಎಲ್ಲರಿಗೂ ಮನೆ ನಿರ್ಮಿಸಿಕೊಡುವ ಬಗ್ಗೆ ಹಿಂದಿಗಿಂತಲೂ ಅಧಿಕ ಕೆಲಸ ಮಾಡಬೇಕಿದೆ.ಕಡಿಮೆ ಆದಾಯದ ಗುಂಪಿನಲ್ಲಿರುವ ಜನಕ್ಕೆ ವಸತಿ ಒದಗಿಸ ಬೇಕಿದ್ದರೆ ಸುರಕ್ಷಿತ ಮನೆ ಮತ್ತು ಭವಿಷ್ಯವನ್ನು ಖಾತರಿಪಡಿಸುವ ರೀರಿಯಲ್ಲಿ ದರವನ್ನು ನಿಯಂತ್ರಿಸುವ ಅಗತ್ಯವಿರುತ್ತದೆ.ಸ್ವಿಫ್ಟ್ ಅನುಮತಿಗಳ ವಿಚಾರ ಸೇರಿದಂತೆ ಸರ್ಕಾರದಿಂದ ನಾವು ಅಗತ್ಯ ಬೆಂಬಲವನ್ನು ಬಯಸುತ್ತೇವೆಎಂದರು.