ಡಿ.5ರಂದು ಬೋಜಗಡೆ ದಂಪತಿಗಳ ನೆನಪಿಗಾಗಿ ಶಾಲಾ ನಾಮಫಲಕ ಕಾರ್ಯಕ್ರಮ

Varta Mitra News

ಬೆಂಗಳೂರು,ಡಿ.3- ಶ್ರೀ ವೆಂಕಟರಾವ್ ಬೋಜಗಡೆ ಹಾಗೂ ಅವರ ಪತ್ನಿ ತುಕ್ಕೂಬಾಯಿ ಬೋಜಗಡೆ ಅವರ ಸ್ಮರಣಾರ್ಥಸರ್ಕಾರಿ ಪ್ರಾಥಮಿಕ ಶಾಲಾ ನಾಮಫಲಕ ಉದ್ಘಾಟನಾ ಕಾರ್ಯಕ್ರಮ ಇದೇ 5ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೊಮ್ಮಗಳು ಶಕುಂತಲಾ ಮಾನೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಶಾಲಾ ಆವರಣದಲ್ಲಿ ತುಕ್ಕೂಬಾಯಿ ಬೋಜಗಡೆ ಮತ್ತು ಮನ್ನಾಬಾಯಿ ನಿಕ್ಕಿಂ ಸರ್ಕಾರಿ ಪ್ರಾಥಮಿಕ ಶಾಲೆ ಎಂದು ನಾಮಫಲಕ ಉದ್ಘಾಟ್ಞಛಿ ಯಾಗಲಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ರವಿಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಗೌರವಾನ್ವಿತ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫರ್ ಮುಖ್ಯ ಅತಿಥಿಗಳಾಗಿ ಕಾಪೆರ್Çೀರೇಟರ್ ಎಚ್.ಎ.ಕೆಂಪೇಗೌಡ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಶ್ರೀಮತಿ ತುಕ್ಕೂಬಾಯಿ ಬೋಜಗಡೆ ಅವರು ಪತಿ ವೆಂಕಟರಾವ್ ಬೋಜಗಡೆ ಅವರ ನೆನಪಿಗಾಗಿ ಗವಿಪುರದ ಗುಟ್ಟಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇರುವ ಕಟ್ಟಡವನ್ನು ಕಟ್ಟಿಸಿದ್ದರು. ಹಾಗಾಗಿ ತಾತ ವೆಂಕಟರಾವ್ ಬೋಜಗಡೆ ಅವರ ನೆನಪಿನಾರ್ಥ ಶಾಲಾ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ