ಕಲ್ಗುಗಣಿ ಮತ್ತು ಸ್ಟೋನ್ ಕ್ರಷರ್ ತೊಂದರೆಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲಿರುವ ಅಸೋಸಿಯೇಷನ್ ಪದಾಧಿಕಾರಿಗಳು

ಬೆಂಗಳೂರು,ಡಿ.3-ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಪ್ರವಾಸ ಮುಗಿಸಿದ್ದು ನಾಳೆ ಗಾಂಧಿನಗರದ ಮೌರ್ಯ ಹೋಟೆಲ್‍ನಲ್ಲಿ 11 ಗಂಟೆಗೆ ಸಭೆ ನಡೆಯಲಿದೆ ಎಂದು ಸ್ಟೋನ್ ಕಸ್ಟರ್ ಅಧ್ಯಕ್ಷಸಂಜೀವ್ ಹಟ್ಟಿಹೊಳೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸೋಸಿಯೇಷನ್ ಪದಾಧಿಕಾರಿಗಳು ಕಲ್ಗುಗಣಿ ಮತ್ತು ಸ್ಟೋನ್ ಕ್ರಷರ್‍ಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಯಿತು. ಅವರ ಸಮಸ್ಯೆಗಳನ್ನು ಆಲಿಸಿ ಈಗ ಅದರ ವರದಿಯನ್ನು ಸಿದ್ದಪಡಿಸಿದ್ದು ನಾಳೆ ನಡೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಈ ಹಿಂದೆ ಸರ್ಕಾರ ನಮ್ಮ ಉದ್ಯಮಿಗೆ ಕೆಲವು ಕಾನೂನು ಮಾಪಾರ್ಡುಗಳನ್ನು ಮಾಡಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ ಇವರೆಗೂ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ರಾಜ್ಯದಲ್ಲಿ ಸ್ಟೋನ್ ಕ್ರಷರ್ ಮತ್ತು ಕಟ್ಟಡದ ಕಲ್ಲು ಕ್ವಾರಿ ಸುಮಾರು 3500 ಇದ್ದು ಇದರಲ್ಲಿ 1240 ಕ್ರಷರ್‍ಗಳಿಗೆ ಮಾತ್ರ ಪರಾವನಗಿ ನೀಡಿದ್ದಾರೆ. ಇನ್ನುಳಿದ ಕ್ರಷರ್‍ಗಳಿಗೆ ಕಾರಣಾಂತರಗಳಿಂದ ಪರಾವನಗಿ ನೀಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು.
ಬೆಳಗಾವಿ ಅಧಿವೇಶನದೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿದ್ದರಾಜು, ಮಂಜುನಾಆಥ್, ಪುರುಷೋತ್ತಮ್, ಭಾಸ್ಕರ್ ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ