ಬೆಂಗಳೂರು, ಡಿ.2- ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಬಿಬಿಎಂಪಿ 100ರೂ.ದಂಡ ವಿಧಿಸಿದೆ.
2017-18ನೆ ಸಾಲಿನ ಆಸ್ತಿ ತೆರಿಗೆಯನ್ನು ನಟ ದರ್ಶನ್ ಪಾವತಿಸಿಲ್ಲ. ಹಾಗಾಗಿ ಅವರಿಗೆ ಪಾಲಿಕೆ 100ರೂ.ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.
ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಆಸ್ತಿ ತೆರಿಗೆಯನ್ನು ದರ್ಶನ್ ಕಟ್ಟಿಲ್ಲ. 2017-18ನೆ ಸಾಲಿನಲ್ಲೂ ಅವರು ತೆರಿಗೆ ಕಟ್ಟದ ಕಾರಣ 100ರೂ.ದಂಡ, ಜತೆಗೆ 2164ರೂ. ಬಡ್ಡಿ ಪಾವತಿಸುವಂತೆ ಸೂಚಿಸಲಾಗಿದೆ.
2017ರಿಂದ 2019ನೆ ಸಾಲಿನವರೆಗೆ 12,024ರೂ.ಆಸ್ತಿ ತೆರಿಗೆಯನ್ನು ಅವರು ಕಟ್ಟಬೇಕಿತ್ತು.ಬಾಕಿ ತೆರಿಗೆ ಕಟ್ಟದ ಕಾರಣ ಈಗ ಒಟ್ಟಾರೆ ತೆರಿಗೆ, ಬಡ್ಡಿ ಹಣ ಸೇರಿ ಒಟ್ಟು 14,889ರೂ.ಪಾವತಿಸಬೇಕಿದೆ.
ಸಿನಿಮಾದಲ್ಲಿ ನಟನೆಗಾಗಿ ಕೋಟಿಗಟ್ಟಲೆ ಸಂಭಾವನೆ ಪಡೆಯುವ ನಟ ಇಷ್ಟು ಕಡಿಮೆ ಮೊತ್ತದ ಆಸ್ತಿ ತೆರಿಗೆ ಕಟ್ಟದಿರುವುದು ಅಚ್ಚರಿ ಮೂಡಿಸಿದೆ.ಅವರ ನಿರ್ಲಕ್ಷ್ಯಕ್ಕೆ ಬಿಬಿಎಂಪಿ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.