ಅಬ್ಯಾಕಸ್ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಡಾ.ಸ್ನೇಹಲ್ ಕರಿಯಾ

ಬೆಂಗಳೂರು, ಡಿ.2- ಮೆದುಳಿಗೆ ಕಸರತ್ತು ನೀಡುವ ಕ್ರೀಡೆ ಎನಿಸಿಕೊಂಡಿರುವ ಅಬ್ಯಾಕಸ್ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಯುಸಿಎಂಎಎಸ್ ಅಬ್ಯಾಕಸ್ ಸಂಸ್ಥೆಯ ಭಾರತ ವಿಭಾಗದ ಅಧ್ಯಕ್ಷ ಡಾ.ಸ್ನೇಹಲ್ ಕರಿಯಾ ಹೇಳಿದರು.

ನಗರದಲ್ಲಿ ರಾಜ್ಯಮಟ್ಟದ 8ನೆ ಯುಸಿಎಂಎಎಸ್ ಅಬ್ಯಾಕಸ್ ಮತ್ತು ಮಾನಸಿಕ ಅಂಕಗಣಿತ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ವರ್ಷದ ಮಗು ಕೆಲವೇ ಸೆಕೆಂಡ್‍ಗಳಲ್ಲಿ ಕಠಿಣ ಗಣಿತದ ಸಮಸ್ಯೆಗಳನ್ನು ಯಾವುದೇ ಯಂತ್ರಗಳ ಉಪಯೋಗವಿಲ್ಲದೆ ಉತ್ತರ ಕೊಡುವುದು ಬಹಳ ವಿಶೇಷ. ಇಂತಹ ಬೌದ್ಧಿಕ ಶಕ್ತಿಯ ವಿಕಸನ ಬಾಲ್ಯದಲ್ಲಿಯೇ ಆಗುವುದರಿಂದ ಇಂತಹ ಮಕ್ಕಳು ಶೈಕ್ಷಣಿಕ ಸಮಸ್ಯೆಗಳಿಂದ ದೂರವಾಗುತ್ತಾರೆ. ಯಾವುದೇ ಸಮಸ್ಯೆ ಎದುರಾದರೂ ವಿಚಲಿತರಾಗುವುದಿಲ್ಲ ಎಂದು ಹೇಳಿದರು.

ಗಣಿತದ ಸಮಸ್ಯೆಗಳಿಗೆ ಅತ್ಯಂತ ಸುಲಭ ಪರಿಹಾರ ನೀಡುವ ಅಬ್ಯಾಕಸ್ ಇನ್ನೂ ಹೆಚ್ಚಿನದಾಗಿ ಪ್ರಚಾರ ಪಡೆಯಬೇಕಿದೆ ಎಂದು ಪೆÇ್ರೀ ಮಾಡರೇಟರ್ ಅಪೇಕ್ಷಾ ಪಟೇಲ್ ಹೇಳಿದರು.

4 ರಿಂದ 14 ವರ್ಷದ ಮಕ್ಕಳು ಅಬ್ಯಾಕಸ್ ತರಬೇತಿ ಪಡೆಯುವುದರಿಂದ ಶೈಕ್ಷಣಿಕ ಜೀವನದಲ್ಲಿ ಅವರು ಯಶಸ್ಸು ಸಾಧಿಸುತ್ತಾರೆ.ಅಲ್ಲದೆ, ಶೈಕ್ಷಣಿಕ ಒತ್ತಡ ಕಡಿಮೆಯಾಗುತ್ತದೆ.ಬೇರೆ ವಿಷಯಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ ಎಂದು ಯುಸಿಎಂಎಎಸ್‍ನ ಕರ್ನಾಟಕ ಭಾಗದ ವ್ಯವಸ್ಥಾಪಕ ನಿರ್ದೇಶಕಿ ಜಯಾ ಸಂತೋಷಿ ಬಾಯಿ ತಿಳಿಸಿದರು.
ರಾಜ್ಯಾದ್ಯಂತ ವಿವಿಧ ಭಾಗಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕ್ಲಿಷ್ಟಕರ ಗಣಿತದ ಸಮಸ್ಯೆಗಳನ್ನು ಸುಲಲಿತವಾಗಿ ಕೆಲವೇ ಕ್ಷಣಗಳಲ್ಲಿ ಬಿಡಿಸುತ್ತಿದ್ದುದು ಕಂಡುಬಂದಿತು.
ಅಬ್ಯಾಕಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ