ಜಮ್ಮು-ಕಾಶ್ಮೀರ ಅಖ್ನೂರ್ ಸೆಕ್ಟರ್ ಬಳಿ ಗಣಿ ಸ್ಫೋಟ: ಇಬ್ಬರು ಯೋಧರ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ ಬಳಿ ಗಣಿ ಸ್ಫೋಟಗೊಂಡು ಇಬ್ಬರು ಯೋಧರು ಮೃತಪಟ್ಟಿದ್ದು, ಇಬ್ಬರುಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿನ ಪಲ್ಲನ್ವಾಲಾದ ಗಡಿ ನಿಯಂತ್ರಣ ರೇಳೆ ಬಳಿ ಗಣಿ ಸ್ಫೋಟಗೊಂಡಿದೆ. ಈ ವೇಳೆ ನಾಲ್ವರು ಯೋಧರಿಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಗಾಯಗೊಂಡಿದ್ದ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ. ಮೃತ ಯೋಧರನ್ನು ಸುರ್ಜೀತ್ ಸಿಂಗ್ ಹಾಗೂ ಸೂರಜ್ ಸಿಂಗ್ ಭಕುನ್ ಎಂದು ಗುರ್ತಿಸಲಾಗಿದೆ. ಮತ್ತಿಬ್ಬರು ಯೋಧರ ಸ್ಥಿತಿ ಗಂಭೀರವಾಗಿದೆ.

ಘಟನೆ ಬಳಿಕ ಸೇನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇದೊಂದು ಆಕಸ್ಮಿಕವಾಗಿ ಸಂಭವಿಸಿರುವ ಸ್ಫೋಟವಾಗಿದ್ದು, ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

Jammu and Kashmir,mine blast, Two soldiers killed

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ