ಡಿ.2ರಂದು ಎಚ್.ಎಂ.ಟಿ ಲೇಔಟ್ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು, ನ.30-ನಗರದಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳೂ ವೃದ್ಧಿಸುತ್ತಿರುವುದರಿಂದಲ ಡಿ.2 ರಂದು ಎಚ್‍ಎಂಟಿ ಲೇಔಟ್‍ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶ್ವಾಸಕೋಶ ತಜ್ಞ ಡಾ.ಚೇತನ್‍ಕುಮಾರ್ ಅವರು ಡಿ.2 ರಂದು ನಗರದ ಎಚ್‍ಎಂಟಿ ಲೇಔಟ್‍ನಲ್ಲಿರುವ ಶಾರದಾ ಶ್ವಾಸಕೋಶ ಮತ್ತು ಸಾಮಾನ್ಯ ಚಿಕಿತ್ಸಾ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.

ಸದಾ ಕೆಮ್ಮು, ನೆಗಡಿ, ಮೂಗು ಸೋರುವಿಕೆ, ಉಸಿರಾಡಲು ತೊಂದರೆ, ವೀಸಿಂಗ್, ಎದೆನೋವು, ನಿರಂತರ ಕೆಮ್ಮು, ಉಬ್ಬಸ, ಕಫ, ಧೂಮಪಾನ, ತಂಬಾಕು ಚಟದಿಂದ ಉಂಟಾಗುವ ಶ್ವಾಸಕೋಶ ಸಮಸ್ಯೆಗಳು ಸದಾ ನಿದ್ದೆ ಮಂಪರು, ಗೊರಕೆ ಶಬ್ಧ ಮಾಡುವುದು, ಬೊಜ್ಜುತನ, ಅಸ್ತಮಾ, ಅಲರ್ಜಿ, ಜ್ವರ, ಟಿ.ಬಿ. ಕಾಯಿಲೆ, ಮಧುಮೇಹ, ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆಯುಳ್ಳವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಶಾರದಾ ಶ್ವಾಸಕೋಶ ಮತ್ತು ಸಾಮಾನ್ಯ ಚಿಕಿತ್ಸಾ ಕೇಂದ್ರ, ಶ್ವಾಸಕೋಶ ಕಾಯಿಲೆಗಳ ಉಚಿತ ಆರೋಗ್ಯ ಶಿಬಿರ, ನಂ.61, 1ನೇ ಬ್ಲಾಕ್ ಎಚ್‍ಎಂಟಿ ಲೇಔಟ್, ನಾಗಸಂದ್ರ ಇಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಮೊ.8553847179 ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ