ಎಲ್‌ಪಿಜಿ ಗ್ರಾಹಕರಿಕೆ ಸಿಹಿಸುದ್ದಿ! ಸಬ್ಸಿಡಿ ಎಲ್‌ಪಿಜಿ ಬೆಲೆ 6.52 ರುಪಾಯಿ ಇಳಿಕೆ!

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗುತ್ತಿದ್ದಂತೆ ಇದೀಗ ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.
ಕೇಂದ್ರ ಸರ್ಕಾರ ಸಬ್ಸಿಡಿ ಸಹಿತ 14 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 6.52 ರು.ಗಳ ಕಡಿತ ಮಾಡಲಾಗಿದೆ. ಇಂದು ರಾತ್ರಿಯಿಂದಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 500.90 ರುಪಾಯಿಗೆ ಸಿಲಿಂಡರ್ ಸಿಗಲಿದೆ.
ಕಳೆದ ಆರು ತಿಂಗಳಿಂದ ಬೆಲೆ ಏರಿಕೆ ಕಂಡಿದ್ದ ಎಲ್‌ಪಿಜಿ ದರ ಇದೀಗ ಮೊದಲ ಬಾರಿಗೆ ಇಳಿಕೆ ಕಂಡಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ದರ 133 ರುಪಾಯಿ ಕಡಿಮೆಯಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ