ಏಕತಾ ಪ್ರತಿಮೆಗಿಂತ ಎತ್ತರವಾಗಿರಲಿದೆಯಂತೆ ಆಂಧ್ರದ ನೂತನ ವಿಧಾನಸಭಾ ಕಟ್ಟಡ

ಹೈದರಾಬಾದ್: ಆಂಧ್ರ ಪ್ರದೇಶ ನೂತನ ರಾಜಧಾನಿ ಅಮರಾವತಿಯಲ್ಲಿ ನಿರ್ಮಾಣವಾಗುತ್ತಿರುವ ವಿಧಾನಸಭೆ ಕಟ್ಟಡ ಏಕತಾ ಪ್ರತಿಮೆಗಿಂತ ಎತ್ತರವಾಗಿರಲಿದೆಯಂತೆ. ಈ ಕುರಿತು ಸ್ವತ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.

182 ಮೀಟರ್‌ ಎತ್ತರದ ಏಕತಾ ಪ್ರತಮೆಗಿಂತ 250 ಮೀಟರ್‌ ಎತ್ತರದ ಕಟ್ಟಡ ನಿರ್ಮಾಣ ಮಾಡುವುದಾಗಿ ನಾಯ್ಡು ಘೋಷಿಸಿದ್ದು, ಕಟ್ಟಡ ನಿರ್ಮಾಣ ಕುರಿತ ನೀಲನಕ್ಷೆಗೆ ಸರ್ಕಾರ ಅನುಮೋದನೆ ನೀಡಿದೆ.

ಯುನೈಟೆಡ್‌ ಕಿಂಗ್‌ಡಮ್‌ನ ವಾಸ್ತುಶಿಲ್ಪಿಗಳಾದ ನೋರ್ಮಾ ಫಾಸ್ಟರ್ಸ್ ಎಂಬುವವರು ಇದಕ್ಕೆ ಸಂಬಂಧಪಟ್ಟ ನೀಲಿನಕ್ಷೆಯನ್ನು ಸರಕಾರಕ್ಕೆ ನೀಡಲಿದ್ದು, ನಾಯ್ಡು ಈಗಾಗಲೇ ಕಟ್ಟಡದ ವಿನ್ಯಾಸವನ್ನು ಬಹುತೇಕ ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಿರುತ್ತದೆ ಹಾಗೂ 250 ಮೀಟರ್‌ ಎತ್ತರದ ಟವರ್‌ ಅನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

andhra pradesh,assembly building,taller than statue-of-unity

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ