ಕಾಶ್ಮೀರದಲ್ಲಿ ಉದ್ಭವಿಸಿರುವ ಸಮಸ್ಯೆಗಳಿಗೆ ಅಂದಿನ ಪ್ರಧಾನಿ ಜವಹರ ಲಾಲ್ ನೆಹರು ಅವರೇ ಕಾರಣ: ಅಮಿತ್ ಶಾ

ರಾಜಮಂಡ್ರಿ: ಇಂದು ಉದ್ಭವಿಸಿರುವ ಕಾಶ್ಮೀರ ಬಿಕ್ಕಟ್ಟಿಗೆ ಅಂದಿನ ಪ್ರಧಾನಿ ಪಂಡಿತ್ ಜವಹಾರ್ ಲಾಲ್ ನೆಹರು ಅವರೇ ಕಾರಣ. ಕಾಶ್ಮೀರ ಸಮಸ್ಯೆಯನ್ನು ಅಂದೇ ಬಗೆಹರಿಸಿದ್ದರೆ ಇಂದು ಕಣಿವೆ ರಾಜ್ಯ ಉಗ್ರಗಾಮಿ ಚಟುವಟಿಕೆಗಳಿಂದ ನರಳುವ ಪ್ರಮೆಯವೇ ಬರುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನದೆಸಿದ್ದಾರೆ.

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಮಾತನಾಡಿದ ಶಾ, 1947 ರಲ್ಲಿ ಜವಾಹರ್​ಲಾಲ್​ ನೆಹರೂ ಬದಲಿಗೆ ಸರ್ದಾರ್​ ವಲ್ಲಭಭಾಯಿ ಪಟೇಲ್​ ಪ್ರಧಾನಿಯಾಗಿದ್ದರೆ, ಕಾಶ್ಮೀರದಲ್ಲಿ ಇಂತಹ ಸಮಸ್ಯೆಗಳೇ ಬರುತ್ತಿರಲಿಲ್ಲ ಎಂದರು.

ಇದೇ ವೇಳೆ ಆಂದ್ರ ಸಿಎಮ್ ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ ನದೆಸಿದ ಶಾ, ಚಂದ್ರಬಾಬು ನಾಯ್ಡು ಅವರು ಪಾಕಿಸ್ತಾನ ಪ್ರಧಾನಿ ಮೇಲೆ ನಂಬಿಯಿಟ್ಟಿದ್ದಾರೆ. ಆದರೆ ಭಾರತದ ಪ್ರಧಾನಿ ಮೋದಿಯವರನ್ನು ಅವರು ನಂಬುತ್ತಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು, ದೆಹಲಿಗೆ ತೆರಳಿ ಅಲ್ಲಿ ದರಣಿಗಳನ್ನು ನಡೆಸಲು ಮುಂದಾಗಿದ್ದಾರೆ ಎಂದರು.

ಪ್ರಧಾನಿ ಮೋದಿ ದೇಶಕ್ಕಾಗಿ 18 ಗಂಟೆಗಳ ನಿರಂತರ ಕೆಲಸ ಮಾಡುತ್ತಿದ್ದಾರೆ. ದೇಶ ರಕ್ಷಣೆಗೆ ಅವರು ಸದಾ ಸಿದ್ಧರಿದ್ದಾರೆ. ಕಾಂಗ್ರೆಸ್ ನವರು ನಿರಂತರ ಆರೋಪ ಮಾಡುವುದರಿಂದ ಪ್ರಧಾನಿ ಮೇಲಿನ ಜನರ ನಂಬಿಕೆ ಕಡಿಮೆಯಾಗಲ್ಲ ಎಂದು ಗುಡುಗಿದರು.

Amit Shah, Andhra Pradesh,blames Jawaharlal Nehru for Kashmir issue

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ