ಮಿಜೋರಾಂ: ಮಿಜೋರಾಂ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಣದಲ್ಲಿರುವ 209 ಅಭ್ಯರ್ಥಿಗಳ ಪೈಕಿ 9 ಮಂದಿ ಕ್ರಿಮಿನಲ್ ಪ್ರಕರಣ ಹಿನ್ನಲೆಯುಳ್ಳವರಾಗಿದ್ದಾರೆ.
ಇದೇ 28ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, ಮಿಜೊ ನ್ಯಾಷನಲ್ ಫ್ರಂಟ್ ಹಾಗೂ ಪಕ್ಷೇತರದ ಒಬ್ಬ ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಚುನಾವಣಾ ಕಾವಲು (ಎಡಿಆರ್) ಸ್ಪಷ್ಟಪಡಿಸಿದೆ.
ಇನ್ನು 209 ಅಭ್ಯರ್ಥಿಗಳ ಪೈಕಿ 116 ಮಂದಿ ಅಗರ್ಭ ಶ್ರೀಮಂತರೆಂದು ತಮ್ಮ ನಾಮಪತ್ರಗಳಲ್ಲಿ ಉಲ್ಲೇಖಿಸಿದ್ದಾರೆ. ದಿ ಮಿಜೋ ನ್ಯಾಷನಲ್ ಫ್ರೆಂಡ್ ಪಕ್ಷದಲ್ಲಿ 35 ಮಂದಿ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಿದ್ದರೆ, ಕಾಂಗ್ರೆಸ್ (33), ಬಿಜೆಪಿ (17) ಅಭ್ಯರ್ಥಿಗಳು ಸಿರಿವಂತರೆಂದು ಬಿಂಬಿಸಿಕೊಂಡಿದ್ದಾರೆ.
ಎಂನ್ಎಫ್ ಪಕ್ಷದಿಂದ ಹಚ್ಹೆಕ್ ಕ್ಷೇತ್ರದಿಂದ ಸ್ಪರ್ಧಿಸಿರುವ ಲಾಲ್ರಿನೆನ್ಗಾ ಸೈಲೋ 100 ಕೋಟಿಯ ಒಡೆಯನಾಗಿದ್ದು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಬಿಂಬಿಸಿಕೊಂಡಿದ್ದಾರೆ. 142 ಮಂದಿ ಪದವೀಧರರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, 18 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 40 ಕ್ಷೇತ್ರಗಳನ್ನು ಹೊಂದಿರುವ ಮಿಜೋರಾಂಗೆ ನವೆಂಬರ್ 28 ರಂದು ಚುನಾವಣೆ ನಡೆಯಲಿದೆ.
Mizoram polls,9 facing criminal charges,