ಸ್ಮಿತ್, ವಾರ್ನರ್ಗೆ ನೀಡಿದ ಶಿಕ್ಷೆಯನ್ನ ಎತ್ತಿ ಹಿಡಿದ ಕ್ರಿಕೆಟ್ ಆಸ್ಟ್ರೇಲಿಯಾ

ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿರುವ ತಂಡದ ಮಾಜಿ ನಾಯಕ ಸ್ವೀವ್ ಸ್ಮಿತ್, ಸ್ಫೋಟಕ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಮತ್ತು ಬಾನ್‍ಕ್ರಾಫ್ಟ್ ನಿಷೇಧವನ್ನ ಕಡಿತಗೊಳಿಸಲು ಆಡಳಿತ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾ ನಿರಾಕರಿಸಿದ್ದು ತಾನು ನೀಡಿದ ಶಿಕ್ಷೆಯನ್ನ ಎತ್ತಿ ಹಿಡಿದಿದೆ.
ಇತ್ತಿಚೆಗೆ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್‍ವಾರ್ನರ್ ಅನುಪಸ್ಥಿಯಲ್ಲಿ ಆಸ್ಟ್ರೇಲಿಯಾ ತಂಡ ಬರೀ ಸೋಲುಗಳನ್ನೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆಟಗಾರರ ಸಮಿತಿ ನಿಷೇಧವನ್ನ ಕಡಿತಗೊಳಿಸುವಂತೆ ಮನವಿಯನ್ನ ಸಲ್ಲಿಸಿತು. ಇದನ್ನ ಪರಿಶೀಲಿಸಿದ ಮಂಡಳಿ ಕೊನೆಗೂ ತಾನು ನೀಡಿದ ಶಿಕ್ಷೆಯನ್ನ ಎತ್ತಿ ಹಿಡಿಯಿತು. ಇದರಿಂದ ಆಟಗಾರರು ನಿರಾಸೆಗೊಳಗಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ