ಕಾಸಿಯಾಗೆ ಭೇಟಿ ನೀಡಲಿರುವ ಜೆಕ್ ಗಣರಾಜ್ಯದ ನಿಯೋಗ

ಬೆಂಗಳೂರು, ನ.21-ಜೆಕ್ ಗಣರಾಜ್ಯದ ಕೈಗಾರಿಕಾ ಸಚಿವಾಲಯದ ರಿಚರ್ಡ್ ಹ್ಲಾವಟಿ ನೇತೃತ್ವದ ವಾಣಿಜ್ಯೋದ್ಯಮಿಗಳ ನಿಯೋಗವೊಂದು ನ.26ರಂದು ಕರ್ನಾಟಕ ರಾಜ್ಯ ಕೈಗಾರಿಕೆಗಳ ಸಂಘ-ಕಾಸಿಯಾಗೆ ಭೇಟಿ ನೀಡಲಿದೆ.

ಜಂಟಿ ಪಾಲುದಾರಿಕೆ, ತಂತ್ರಜ್ಞಾನ ಸಹಭಾಗಿತ್ವ, ಉತ್ಪನ್ನಗಳ ಖರೀದಿ ಮತ್ತು ಮಾರಾಟ ಇತ್ಯಾದಿ ಕ್ಷೇತ್ರಗಳಲ್ಲಿ ಅವಕಾಶಗಳ ಅನ್ವೇಷಣೆಗಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವಲಯದ ಭಾರತೀಯ ಸಂಸ್ಥೆಗಳನ್ನು ಭೇಟಿ ಮಾಡಲು ಈ ನಿಯೋಗ ಉತ್ಸುಕವಾಗಿದೆ. ಎಂಜಿನಿಯರಿಂಗ್ ಉದ್ಯಮದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಚೆಕ್ ಸಂಸ್ಥೆಗಳು ಜಂಟಿ ಪಾಲುದಾರಿಕೆ, ತಂತ್ರಜ್ಞಾನ ಸಹಭಾಗಿತ್ವ, ಮಾರುಕಟ್ಟೆ ಅಭಿವೃದ್ದಿ ಇತ್ಯಾದಿಗಾಗಿ ಉತ್ತಮ ಅವಕಾಶಗಳನ್ನು ಒದಗಿಸಲಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ್ ಎಸ್. ಜವಳಿ ತಿಳಿಸಿದ್ದಾರೆ.

ಚೆಕ್ ಗಣರಾಜ್ಯದ ನಿಯೋಗದೊಂದಿಗೆ ಸಂವಾದ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಪರಸ್ಪರ ಅವಕಾಶಗಳ ವಿನಿಮಯಕ್ಕಾಗಿ ಕಾಸಿಯಾ ತನ್ನ ಸದಸ್ಯರಿಗೆ ಜೆÉಕ್ ದೇಶದ ಸಹವರ್ತಿಗಳೊಂದಿಗೆ ಮುಖಾಮುಖಿ ಭೇಟಿಗಾಗಿ ಸಭೆಯನ್ನು ವ್ಯವಸ್ಥೆ ಮಾಡಿದೆ. ನ.26ರಂದು ಸಂಜೆ 4 ಗಂಟೆಗೆ ಕಾಸಿಯಾ ಸಭಾಂಗಣದಲ್ಲಿ ಸಭೆ ನಡೆಯಲಿದೆ.

ಕಾಸಿಯಾಗೆ ಭೇಟಿ ನೀಡಲಿರುವ ನಿಯೋಗದೊಂದಿಗೆ ಮುಖಾಮುಖಿ ಭೇಟಿ ಮಾಡಲು ಬಯಸುವ ಸದಸ್ಯರು ನ.24ರ ಒಳಗೆ ತಮ್ಮ ಹೆಸರುಗಳನ್ನು ಕಂಪನಿಯ ವಿವರಗಳೊಂದಿಗೆ ಈ : ಠಿಡಿesiಜeಟಿಣಞಚಿssiಚಿ@gmಚಿiಟ.ಛಿom ಈ-ಮೇಲ್ ಮೂಲಕ ಕಾಸಿಯಾದೊಂದಿಗೆ ನೋಂದಣಿ ಮಾಡಿಕೊಳ್ಳುವಂತೆ ಅಧ್ಯಕ್ಷರು ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ