ಇಂದು ಟೀಂ ಇಂಡಿಯಾ – ಆಸ್ಟ್ರೇಲಿಯಾ ನಡುವೆ ಮೊದಲ ಟಿ20 ಕದನ

ಬ್ರಿಸ್ಬೇನ್ : ಭಾರಿ ಕೂತೂಹಲ ಕೆರೆಳಿಸಿರುವ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮಹಾಕದನ ಇಂದಿನಿಂದ ಆರಂಭವಾಗಲಿದೆ. ಬ್ರಿಸ್ಬೇನ್‍ನ ಅಂಗಳದಲ್ಲಿ ಇಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಪಡೆ ಮೊದಲ ಟಿ20 ಕದನ ನಡೆಸಲಿದೆ.
ಟೀಂ ಇಂಡಿಯಾ ಈಗಾಗಲೇ ಸತತ ಏಳು ಸರಣಿಗಳನ್ನ ಗೆದ್ದು ಬೀಗಿದ್ರೆ ಇತ್ತ ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇಲ್ಲದೇ ಕಳೆದ ಮಾರ್ಚ್‍ನಿಂದ ಒಂದೇ ಒಂದು ಸರಣಿಯನ್ನ ಗೆದ್ದಿಲ್ಲ. ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕದನ ರೋಚಕತೆಯಿಂದ ಕೂಡಿದೆ.
ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಇದುವರೆಗೂ ಟಿ20 ಆವೃತ್ತಿಯಲ್ಲಿ 15 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 10 ಪಂದ್ಯಗಳಲ್ಲಿ ಗೆದ್ದರೆ ಆಸ್ಟ್ರೇಲಿಯಾ 5 ಪಂದ್ಯಗಳಲ್ಲಿ ಗೆದ್ದುಕೊಂಡಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ಭಾರತ ಆಥಿತೇಯರ ವಿರುದ್ಧ ಆರು ಬಾರಿ ಅಡಿದ್ದು ಇದರಲ್ಲಿ ಆಸ್ಟ್ರೇಲಿಯಾ 4 ಬಾರಿ ಭಾರತ 2 ಬಾರಿ ಗೆದ್ದಿದೆ. ಎಲ್ಲ ವಿಭಾಗದಲ್ಲೂ ಬಲಿಷ್ಠ ಹೊಂದಿರು ಕೊಹ್ಲಿ ಪಡೆ ಸ್ಟಾರ್ ಆಟಗಾರರಿಲ್ಲದೇ ಬಳಲುತ್ತಿರುಯವ ಆಸ್ಟ್ರೇಲಿಯಾ ಎದುರು ಗೆಲ್ಲುವ ಫೇವರಿಟ್ ತಂಡ ಎನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ