ಬೆಂಗಳೂರು, ನ.21- ಟಾರಿಯನ್ ಸಂಸ್ಥೆ ವತಿಯಿಂದ ವಿಶಿಷ್ಟ ಸಂಗೀತ ಉತ್ಸವ ಎಂಫೆಸ್ಟ್ ಕಾರ್ಯಕ್ರಮವನ್ನು ಜ.18ರಿಂದ ಮೂರು ದಿನಗಳ ಕಾಲ ಓರಾಯನ್ ಮಾಲ್ನ ಲೇಕ್ಸೈಡ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಕೆ.ಲೋಕೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿಶ್ವದ ವಿವಿಧ ಭಾಗಗಳಿಂದ ವೈವಿದ್ಯಮಯ ಸಂಗೀತ ಸ್ಮರಣೆಗಾಗಿ ಈ ಸಂಗೀತ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಉತ್ಸವದಲ್ಲಿ ಸಂಗೀತಗೋಷ್ಠಿ, ಸಂಗೀತ ಪ್ರಶಸ್ತಿ, ಸಂಗೀತ ನಿಯತಕಾಲಿಕೆಗಳು, ವಿಶೇಷ ಆಕರ್ಷಣೆಗಳಾಗಿರುತ್ತವೆ. ಸಂಗೀತದ ವಿವಿಧ ವಾದ್ಯಗಳ ಪರಿಚಯ ಹಾಗೂ ಕೀಮಾ ಅವಾರ್ಡ್ ಮತ್ತು ಬ್ಯಾಟಲ್ ಆಫ್ ಬ್ಯಾಂಡ್ ಪ್ರಶಸ್ತಿಗಾಗಿ ಇದೇ 24ರಿಂದ ಡಿಸೆಂಬರ್ 6ರವರೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ನೋಂದಣಿಗಾಗಿ ಮೊಬೈಲ್ 9008008458 ಸಂಪರ್ಕಿಸಬಹುದು. ವೆಬ್ಸೈಟ್ ತಿತಿತಿ.mಚಿesಣ.ಛಿo.iಟಿ ನಲ್ಲಿ ಆನ್ಲೈನ್ ಮೂಲಕವೂ ನೋಂದಾಯಿಸಬಹುದು ಎಂದರು.
ಸಂಗೀತಗಾರ್ತಿ ಇಂದು ವಿಶ್ವನಾಥ್, ನಟ ನಾಗೇಂದ್ರ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಖ್ಯಾತಿಯ ಡ್ರಮ್ಮರ್ ವಾದಕ ಮಂಜುನಾಥ್, ಕೊಳಲುವಾದಕ ಸಂದೀಪ್ವಶಿಷ್ಟ, ಖ್ಯಾತ ಗಿಟಾರ್ವಾದಕ ಚರಣ್ರಾವ್ ಒಳಗೊಂಡಂತೆ ಸಂಗೀತ ಲೋಕದ ಅನೇಕ ಖ್ಯಾತನಾಮರು ಈ ಮೂರು ದಿನಗಳ ಉತ್ಸವದಲ್ಲಿ ವಿಶ್ವ ಸಂಗೀತ ಭಾರತ ಸಂಗೀತ ಮತ್ತು ಕನ್ನಡದ ಸಂಗೀತ ಲೋಕವನ್ನು ಸಂಗೀತ ಪ್ರಿಯರಿಗೆ ಉಣಬಡಿಸಲಿದ್ದಾರೆ ಎಂದು ಅವರು ತಿಳಿಸಿದರು.