ಹಬ್ಬಗಳಲ್ಲಿ ದುಂದು ವೆಚ್ಚ ಮಾಡುವ ಬದಲು ಬಡವರಿಗೆ ಸಹಾಯ ಮಾಡುವ ಕೆಲಸ ಮಾಡಲು ಜಯಕರ್ನಾಟಕದ ಸಲಹೆ

ಬೆಂಗಳೂರು, ನ.21- ಹಬ್ಬಗಳಲ್ಲಿ ದುಂದು ವೆಚ್ಚ ಮಾಡದೆ ಬಡವರಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡುವಂತೆ ಜಯಕರ್ನಾಟಕ ದಲಿತ ಮತ್ತು ಅಲ್ಪಸಂಖ್ಯಾತರ ಸಮಿತಿ ರಾಜ್ಯ ಮಹಿಳಾ ಅಧ್ಯಕ್ಷೆ ರತ್ನಮ್ಮ ಇಂದಿಲ್ಲಿ ತಿಳಿಸಿದರು.

ಜಯಕರ್ನಾಟಕ ಸಂಘಟನೆ ವತಿಯಿಂದ ಈದ್‍ಮಿಲಾದ್ ಹಬ್ಬದ ಪ್ರಯುಕ್ತ ನಗರದ ವಿಕ್ಟೋರಿಯ ಅಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.

ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಹಬ್ಬಗಳನ್ನು ಆಚರಿಸುವುದರಿಂದ ನಮಗಷ್ಟೇ ಸಂತೋಷವಾಗಬಹುದು. ಆದರೆ ಅದೇ ಹಣದಲ್ಲಿ ರೋಗಿಗಳಿಗೆ ಉಪಯೋಗವಾಗುವ ಕೆಲಸ ಮಾಡಿದರೆ ಅವರು ಸಾಯುವ ವರೆಗೆ ನಮ್ಮನ್ನು ನೆನೆದುಕೊಳ್ಳುತ್ತಾರೆ ಎಂದು ಹೇಳಿದರು.

ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅಣ್ಣನವರ ನೇತೃತ್ವದಲ್ಲಿ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.

ಜಯಕರ್ನಾಟಕ ಸಂಘಟನೆಯಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತನೂ ಬಡವರ ಧ್ವನಿಯಾಗಿ ನಿಲ್ಲಬೇಕು, ಸಂಘಟನೆ ಘಟ್ಟಿಗೊಳಿಸುವತ್ತ ಮುಖ ಮಾಡಬೇಕು ಎಂದು ಹೇಳಿದರು.

ದಲಿತ ಮತ್ತು ಅಲ್ಪಸಂಖ್ಯಾತರ ಸಮಿತಿ ರಾಜ್ಯಾಧ್ಯಕ್ಷ ಆರ್‍ಎಂಎನ್ ಮಂಜುನಾಥ್, ಕಾರ್ಯಾಧ್ಯಕ್ಷ ನಾಗರಾತ್ನ, ಉಪಾಧ್ಯಕ್ಷ ಯುವ ಶಕ್ತಿ ಸೂರಿ, ರಾಧಾಕೃಷ್ಣ, ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ರೈ, ಚಾಮರಾಜಪೇಟೆ ಅಧ್ಯಕ್ಷ ರಫಿಕ್, ಗೋಪಿ, ವಸಂತ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ