ಬೆಂಗಳೂರು, ನ.18- ಸಣ್ಣ ಮತ್ತು ಮಧ್ಯಮ ಸ್ವರೂಪದ ಉದ್ದಿಮೆಗಳಿಗೆ ಸಾಲಸೌಲಭ್ಯ ನೀಡುವ ಅಗ್ರಗಣ್ಯ ಸಂಸ್ಥೆಯಾದ ನಿಯೋಗ್ರೋತ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ನ ಹೂಡಿಕೆ ಸ್ವತ್ತು 1,000 ಕೋಟಿ ರೂ.ದಾಟಿದೆ.
ನಿಯೋಗ್ರೋತ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಮುಖ್ಯಸ್ಥ ಧ್ರುವ್ ಖೈತಾನ್ ಈ ಬಗ್ಗೆ ವಿವರ ನೀಡಿ, ಐದು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ನಮ್ಮ ಹೂಡಿಕೆ ಸ್ವತ್ತು ಕೇವಲ 9 ಕೋಟಿರೂ.ಗಳಷ್ಟಿತ್ತು. ಆದರೆ, ಈ ಹಣಕಾಸು ವರ್ಷದಲ್ಲಿ ನಾವು 1,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಹೂಡಿಕೆ ಸ್ವತ್ತನ್ನು ಹೊಂದಿದ್ದೇವೆ ಎಂದರು.
ಮುಂದಿನ ಹಣಕಾಸು ಸಾಲಿನಲ್ಲಿ ಇದನ್ನು 3,300 ಕೋಟಿ ರೂ.ಗಳಿಗೆಕೊಂಡೊಯ್ಯುವ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ. ನಿಯೋಗ್ರೋತ್ ದೇಶದಾದ್ಯಂತ 13 ಸಾವಿರ ಸಣ್ಣ ಮತ್ತು ಮಧ್ಯಮ ಸ್ವರೂಪದ ಉದ್ದಿಮೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ಸದ್ಯಕ್ಕೆ 21 ಶಾಖೆಗಳನ್ನು ಹೊಂದಿದೆ ಎಂದು ತಿಳಿಸಿದರು.
ನಿಯೋಗ್ರೋತ್ ಸಂಸ್ಥೆಯು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸರಾಗವಾಗಿ ಸಿಗುವ ಸಾಲ ಸೌಲಭ್ಯವನ್ನು ಹೊಂದಿದೆ. ಇದರಿಂದಾಗಿ ದೇಶದಲ್ಲಿ ಉದ್ಯಮಶೀಲತೆಗೆ ಉತ್ತೇಜನ ಸಿಗುತ್ತಿದೆ.ಅಲ್ಲದೆ, ಉದ್ಯೋಗಸೃಷ್ಟಿಯೂ ಸಾಧ್ಯವಾಗುತ್ತಿದೆ. ನಿಯೋಗ್ರೋತ್ ಸಂಸ್ಥೆಯ ಈ ನೀತಿಯಿಂದಾಗಿ ಒಟ್ಟಾರೆಯಾಗಿ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಕಂಡುಬರುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 7,000 ಕೋಟಿ ರೂ. ಮೌಲ್ಯದ ಹೂಡಿಕೆ ಸ್ವತ್ತನ್ನು ಹೊಂದುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದರು