ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿಮೀರುತ್ತಿದೆ. ಒಂದೆಡೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದರೆ ಇನ್ನೊಂದೆಡೆ ನಾಗರಿಕರನ್ನು ಅಪಹರಿಸಿ ಹತ್ಯೆಗೈಯ್ಯುತ್ತಿದ್ದಾರೆ. ಕೇವಲ 48 ಗಂಟೆಗಳ ಅವಧಿಯಲ್ಲಿ ಉಗ್ರರು ಇಬ್ಬರು ನಾಗರಿಕರನ್ನು ಅಪಹರಣ ಮಾಡಿ ಹತ್ಯೆಗೈದಿದ್ದಾರೆ.
ಶನಿವಾರವಷ್ಟೇ ಪುಲ್ವಾಮದಲ್ಲಿ ಓರ್ವನ ಅಪಹರಣ ಮಾಡಿ ಹತ್ಯೆಗೈದಿದ್ದ ಉಗ್ರ ಇಂದು ಶೋಪಿಯಾನ್ ನಲ್ಲಿ 19 ವರ್ಷದ ಯುವಕನನ್ನು ಅಪಹರಿಸಿ ಕತ್ತು ಸೀಳಿ ಬೀಕರವಾಗಿ ಕೊಂದು ಹಾಕಿದ್ದಾರೆ.
ಮೂಲಗಳ ಪ್ರಕಾರ ಈ ಇಬ್ಬರೂ ಸೇನೆಗೆ ಉಗ್ರರ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂಬ ಶಂಕೆಯ ಮೇರೆಗೆ ಉಗ್ರರು ಇವರನ್ನು ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಅಲ್ಲದೆ ಸೇನೆಗೆ
ಮೃತನನ್ನು 19 ವರ್ಷದ ಹುಜೈಫ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಈತ ಕುಲಗಾಮ್ ನ ಮಂಜಗಾಮ್ ಪ್ರದೇಶದ ನಿವಾಸಿ ಎಂದು ಹೇಳಲಾಗಿದೆ.
ನಿನ್ನೆಯಷ್ಟೇ ಪುಲ್ವಾಮ ಜಿಲ್ಲೆಯ ಸೈದಾಪೋರಾದಲ್ಲಿ ನದೀಮ್ ಮಂಜೂರ್ ಎಂಬಾತನನ್ನು ಆತನ ಮನೆಯಿಂದಲೇ ಅಪಹರಣ ಮಾಡಿದ್ದ ಉಗ್ರರು ಆತನನ್ನು ಭೀಕರವಾಗಿ ಕೊಂದು ಹಾಕಿದ್ದರು.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಸೇನೆಗೆ ಮಾಹಿತಿ ನೀಡುವ ಎಲ್ಲರನ್ನೂ ಹತ್ಯೆಗೈಯುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
Young Man Kidnapped By Terrorists,Kashmir, 2 Teens Killed