ಚೊಚ್ಚಲ ಪಂದ್ಯದಲ್ಲೆ ಆಕರ್ಷಕ ಕ್ಯಾಚ್ ಹಿಡಿದ ಆಸೀಸ್‍ನ ತಯಾಲಾ ವಾಲೆಮಿನಿಕ್

ಗಯಾನಾ: ವಿಶ್ವ ಮಹಿಳಾ ಟಿ20 ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ತಂಡ 48 ರನ್‍ಗಳ ಹೀನಾಯ ಸೋಲು ಅನುಭವಿಸಿತು.
ಅದರೆ ಪಂದ್ಯದಲ್ಲಿ ಆಸೀಸ್ ತಂಡದ ವಾಲೆಮಿನಿಕ್ ಹಿಡಿದ ಆಕರ್ಷಕ ಕ್ಯಾಚ್‍ವೊಂದು ಎಲ್ಲರ ಗಮನ ಸೆಳೆÀದಿದೆ. ಟೂರ್ನಿಯಲ್ಲಿ ಇದು ಆಕರ್ಷಕ ಕ್ಯಾಚ್ ಎಂದು ಐಸಿಸಿ ಹೇಳಿದೆ.
16ನೇ ಓವರ್‍ನಲ್ಲಿ ಕನ್ನಡಿತಿ ವೇದಾ ಕೃಷ್ಣಮೂರ್ತಿ ಎದುರಾಳಿ ಸ್ಪಿನ್ನರ್ ಅಶ್ಲೆ ಗಾರ್ಡನರ್ ಎಸೆತದಲ್ಲಿ ಹೊಡೆದ ಚೆಂಡನ್ನ ಸ್ಕ್ವಾರ್ ಲೆಗ್‍ನಲ್ಲಿದ್ದ ವಾಲೆಮಿನಿಕ್ ಎಲ್ಲರು ನಿಬ್ಬರೆಗಾಗುವಂತೆ ಕ್ಯಚ್ ಹಿಡಿದು ಮಿಂಚಿದ್ರು. ವಾಲೆಮಿನಿಕ್ ಭಾರತ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ