ಶಿವಾಜಿನಗರ ವಾರ್ಡ್ ಕೌನ್ಸಿಲರ್ ಫರೀದಾ ನಿವಾಸದ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ನ.13- ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಗಣಿಧಣಿ ಜನಾರ್ದನರೆಡ್ಡಿ ಬಂಧನವಾದ ಬೆನ್ನಲ್ಲೇ ಸಿಸಿಬಿ ಪೆÇಲೀಸರು ಶಿವಾಜಿನಗರ ವಾರ್ಡ್ ಕೌನ್ಸಿಲರ್ ಫರೀದಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.

ಕಾಪೆರ್Çರೇಟರ್ ಫರೀದಾ ಅವರ ಪತಿ ಇಸ್ತಿಯಾಕ್ ಮಾಜಿ ರೌಡಿಯಾಗಿದ್ದು, ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಆತನ ಕೈವಾಡವಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸಿಬಿ ಪೆÇಲೀಸರು ಮನೆ ಮೇಲೆ ದಾಳಿ ನಡೆಸಿ ಇಸ್ತಿಯಾಕ್‍ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇಸ್ತಿಯಾಕ್ ಅವರು ಆ್ಯಂಬಿಡೆಂಟ್ ಸಂಸ್ಥೆಯಲ್ಲಿ ಹಣ ಹೂಡುವಂತೆ ಮಾಜಿ ಸಚಿವ ಹಾಗೂ ಶಾಸಕರೊಬ್ಬರಿಗೆ ಒತ್ತಾಯ ಮಾಡಿದ್ದ ಎನ್ನಲಾಗಿದೆ.
ಆತನ ಮಾತು ನಂಬಿ ಅವರು ಆ್ಯಂಬಿಡೆಂಟ್ ಸಂಸ್ಥೆಯಲ್ಲಿ 2 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.

ಮಾಜಿ ಸಚಿವರ ಹಣ ಹೂಡಿಕೆ ಮಾಡಿದ್ದ ದಾಖಲೆ ಪತ್ರಗಳನ್ನು ಇಸ್ತಿಯಾಕ್ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ.
ಆ್ಯಂಬಿಡೆಂಟ್ ಗೋಲ್ಡ್ ಡೀಲ್‍ನಲ್ಲಿ ಜನಾರ್ದನರೆಡ್ಡಿ ಮತ್ತು ಅವರ ಆಪ್ತರನ್ನು ವಿಚಾರಣೆಗೊಳಪಡಿಸಿ ರೆಡ್ಡಿ ಅವರನ್ನು ಬಂಧಿಸಿ ಜೈಲಿನಲ್ಲಿರಿಸಿರುವ ಸಂದರ್ಭದಲ್ಲೇ ಕಾಂಗ್ರೆಸ್ ಕಾಪೆರ್Çರೇಟರ್ ಮನೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇಸ್ತಿಯಾಕ್ ಹಿನ್ನೆಲೆ: ಒಂದು ಕಾಲದಲ್ಲಿ ಬೆಂಗಳೂರು ಭೂಗತ ಜಗತ್ತಿನಲ್ಲಿ ಕುಖ್ಯಾತ ರೌಡಿ ಹಣೆಪಟ್ಟಿ ಹೊಂದಿದ್ದ ಇಸ್ತಿಯಾಕ್ ಇತ್ತೀಚೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ.

ಈ ಹಿಂದೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ಇಸ್ತಿಯಾಕ್ ಈ ಬಾರಿ ತನ್ನ ಪತ್ನಿ ಫರೀದಾ ಅವರನ್ನು ಶಿವಾಜಿನಗರ ವಾರ್ಡ್‍ನಿಂದ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ರಾಜಕೀಯಕ್ಕೆ ಎಂಟ್ರಿ ಪಡೆದ ನಂತರ ರೌಡಿ ಚಟುವಟಿಕೆಗಳನ್ನು ಬಿಟ್ಟಿದ್ದ ಇಸ್ತಿಯಾಕ್ ಮಾಜಿ ಸಚಿವ ರೋಷನ್‍ಬೇಗ್ ಸೇರಿದಂತೆ ಕಾಂಗ್ರೆಸ್‍ನ ಹಲವಾರು ಮುಖಂಡರೊಂದಿಗೆ ಗುರುತಿಸಿಕೊಂಡಿದ್ದಾನೆ.

ಆದರೆ, ಇದೀಗ ಸಿಸಿಬಿ ಪೆÇಲೀಸರು ಇಸ್ತಿಯಾಕ್ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡು ಆತನನ್ನು ತೀವ್ರ ವಿಚಾರಣೆಗೊಳಪಡಿಸಿರುವುದು ಹಲವಾರು ಅನುಮಾನಗಳಿಗೆ ಪುಷ್ಟಿ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ