
ಬೆಂಗಳೂರು, ನ.13- ಖ್ಯಾತ ಪಿಟೀಲು ವಿದ್ವಾನ್ ಆನೂರು ಎಸ್.ರಾಮಕೃಷ್ಣ ಸ್ಮರಣಾರ್ಥ ಇದೇ 17ರಂದು ಬಸವೇಶ್ವರ ನಗರದ ಕಮಲಾನಗರ ಮುಖ್ಯರಸ್ತೆಯ ಶ್ರೀ ಜಯಮಾರುತಿ ಸೇವಾ ಸಮಿತಿಯಲ್ಲಿ ಅಮೋಘ ಸಂಗೀತ ಕಚೇರಿ ಹಮ್ಮಿಕೊಳ್ಳಲಾಗಿದೆ.
ವಿದ್ವಾನ್ ಕೆ.ಎನ್.ಕೃಷ್ಣಮೂರ್ತಿ ಗುರುವಂದನಾ ಸಮಿತಿ ಕಾರ್ಯಕ್ರಮ ಆಯೋಜಿಸಿದ್ದು, ವಿ.ಪ್ರಸನ್ನ ಬಳ್ಳಾಲ್, ಅನಿರುದ್ಧ್ ಭಾರದ್ವಾಜ್, ಆನೂರು ದತ್ತಾತ್ರೇಯ ಶರ್ಮ, ಸೋಮಶೇಖರ್ ಜೋಯಿಸ್ ಮತ್ತಿತರರು ಸಂಗೀತ ಕಚೇರಿ ನಡೆಸಿಕೊಡುವರು.
ಮ್ಯಾಂಡೋಲಿನ್, ಪಿಟೀಲು, ಮೃದಂಗ ಮತ್ತು ಕೊನಗೂಲ್ ವಾದ್ಯಗಳ ಸಂಗೀತ ಕಚೇರಿ ಏರ್ಪಡಿಸಲಾಗಿದೆ.