ಒಕ್ಕಲಿಗ ಜನಾಂಗದ ವಧು-ವರರ ಮುಖಾಮುಖಿ ಕಾರ್ಯಕ್ರಮ

ಬೆಂಗಳೂರು, ನ.13-ಒಕ್ಕಲಿಗ ಜನಾಂಗದ ವಧು-ವರರ ಮುಖಾಮುಖಿ ಕಾರ್ಯಕ್ರಮವನ್ನು ಇದೇ 18 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30ರವರೆಗೆ ಬನಶಂಕರಿಯಲ್ಲಿ ಏರ್ಪಡಿಸಲಾಗಿದೆ.

ಬನಶಂಕರಿಯ 2ನೇ ಹಂತದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನಮ್ಮ ಭುವನೇಶ್ವರಿ ಒಕ್ಕಲಿಗರ ಮಹಿಳಾ ಸಂಘದ ಕಟ್ಟಡದಲ್ಲಿ ವಧು-ವರರ ಮುಖಾಮುಖಿ ಅವಕಾಶ ಕಲ್ಪಿಸಲಾಗಿದೆ.

ಒಕ್ಕಲಿಗ ಜನಾಂಗದ ವಧು-ವರರು ಹಾಗೂ ವಿಧುರ-ವಿಧವೆಯರ ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ವಧು-ವರರು ಸ್ವವಿವರವನ್ನು ಬನಶಂಕರಿ 2ನೇ ಹಂತದಲ್ಲಿರುವ ಫಾರ್ಮಸಿ ಕಾಲೇಜಿನ ಆವರಣದಲ್ಲಿರುವ ಸಂಘಕ್ಕೆ ತಲುಪಿಸಬಹುದಾಗಿದೆ.

ಪ್ರತಿ ಬುಧವಾರ, ಶನಿವಾರ ಮತ್ತು ಭಾನುವಾರ ಸಂಜೆ 4 ರಿಂದ 6.30ರವರೆಗೆ ಸಂಘ ತೆರೆದಿರುತ್ತದೆ. ವಧು-ವರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗಪಡೆದುಕೊಳ್ಳುವಂತೆ ಸಂಘ ಮನವಿ ಮಾಡಿದೆ.
ನೋಂದಣಿ ಸೇರಿದಂತೆ ಇನ್ನಿತರ ವಿವರಗಳಿಗಾಗಿ 9845316039, 9845895781ನ್ನು ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ