
ಬೆಂಗಳೂರು, ನ.13-ವಾಹನಗಳ ದಾಖಲೆ, ಪರವಾನಗಿ ಪತ್ರ ವಾಹನದಲ್ಲಿ ಇಲ್ಲ ಎಂಬ ಕಾರಣಕ್ಕೆ ದಂಡ ಪಾವತಿಸುವ ಸವಾರರು ಮತ್ತು ವಾಹನ ಚಾಲಕರಿಗೆ ಸಿಹಿ ಸುದ್ದಿಯೊಂದು ಬಂದಿದೆ. ವಾಹನ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ತೋರಿಸಲು ಅವಕಾಶ ನೀಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವಾಲಯ ಮುಂದಾಗಿದೆ.
ನ.2 ರಂದು ಕೇಂದ್ರ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿದೆ.
ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ವಾಹನ ಮಾಲೀಕರು ತಮ್ಮ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ತೋರಿಸಲು ಇದು ಅವಕಾಶ ನೀಡುತ್ತದೆ.
ಈಗ ಸಂಚಾರಿ ಪೆÇಲೀಸರಿಗೆ ವಾಹನಗಳ ದಾಖಲೆಗಳ ಮೂಲ ಪ್ರತಿ ಅಥವಾ ನಕಲಿ ಪ್ರತಿಯನ್ನು ನೇರವಾಗಿ ಪ್ರದರ್ಶಿಸಬೇಕಾಗುತ್ತದೆ. ಆದರೆ ಹೊಸ ನಿಯಮ ಜಾರಿಯಾದರೆ ಮೊಬೈಲ್ನಲ್ಲಿ ದಾಖಲೆಗಳನ್ನು ತೋರಿಸಿದರೆ ಸಾಕಾಗುತ್ತದೆ.
ಚಾಲಕ ಮತ್ತು ವಾಹನ ಮಾಲೀಕರು ದಾಖಲೆಗಳನ್ನು ನೇರವಾಗಿ ಮತ್ತು ಡಿಜಿಟಲ್ ಮಾದರಿಯಲ್ಲಿ ತೋರಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಾಹನದ ಸಾಮಥ್ರ್ಯದ ದಾಖಲೆ, ಪರವಾನಗಿ, ವಾಹನ ಚಾಲನಾ ಪರವಾನಗಿ ಮತ್ತು ಮಾಲಿನ್ಯ ನಿಯಂತ್ರಣ ತಪಾಸಣೆ ಮಾಡಿದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿಯೂ ಸಂಚಾರಿ ಪೆÇಲೀಸರಿಗೆ ತೋರಿಸಬಹುದಾಗಿದೆ.
ನೋಂದಣಿ, ವಿಮೆ ಮತ್ತಿತರ ದಾಖಲೆಗಳನ್ನು ಈ ವ್ಯವಸ್ಥೆಯೊಳಗೆ ತರಲಾಗಿದೆ. ಆದ್ದರಿಂದ ಇನ್ನು ಮುಂದೆ ಪೆÇಲೀಸರು ದಾಖಲೆಯ ಮೂಲ ಪ್ರತಿಗಾಗಿ ಒತ್ತಾಯಿಸುವಂತಿಲ್ಲ. ಈಗಾಗಲೇ ಸಂಚಾರ ಪೆÇಲೀಸರಿಗೆ ಹೊಸ ನಿಯಮದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಡಿಜಿ ಲಾಕರ್ ವ್ಯವಸ್ಥೆ ಅನುಷ್ಠಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಹೊಸ ಅಧಿಸೂಚನೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೊಸ ವ್ಯವಸ್ಥೆಯನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ಈ ವಿಷಯದ ಬಗ್ಗೆ ಸಂಚಾರ ಪೆÇಲೀಸರಿಗೆ ಮಾಹಿತಿ ಮತ್ತು ಅರಿವು ಮೂಡಿಸಲಾಗುವುದು, ಮುಂದಿನ ವರ್ಷದಿಂದ ಹೊಸ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತರಾದ ಪಿ.ಹರಿಶೇಖರನ್ ತಿಳಿಸಿದರು.
ಬೆಂಗಳೂರು, ನ.13-ಬಸವೇಶ್ವರನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದ ಅತ್ಯಾಚಾರ ಪ್ರಕರಣದ ಆರೋಪಿಯ ಪತ್ತೆಗೆ ಪೆÇಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 33 ವರ್ಷದ ಮಹಿಳೆಯ ಮೇಲೆ ಆರೋಪಿ ಅತ್ಯಾಚಾರವೆಸಗಿ, ಮನೆಯ ಅಮೂಲ್ಯ ವಸ್ತುಗಳೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಮಹೀಳೆ ನೀಡಿದ ದೂರಿನಂತೆ ಬಸವೇಶ್ವರ ನಗರ ಪೆÇಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ, ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ ಪೆÇಲೀಸರು ಆರೋಪಿಯ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಪ್ರಕರಣವನ್ನು ಭೇದಿಸಲು ನಾವು ಸ್ಥಳೀಯರು ಮತ್ತು ನೆರೆಹೊರೆಯವರ ಸಹಕಾರ ಕೋರಿದ್ದೇವೆ. ಸಂತ್ರಸ್ಥ ಮಹಿಳೆ ಆಘಾತಕ್ಕೆ ಒಳಗಾಗಿದ್ದು, ಅವರು ಚೇತರಿಸಿಕೊಂಡ ಬಳಿಕ ಆರೋಪಿಯ ಭಾವಚಿತ್ರವನ್ನು ಬಿಡಿಸಿ ಬಿಡುಗಡೆ ಮಾಡಲಾಗುವುದು. ಆರೋಪಿ ವೃತ್ತಿಪರ ಅಪರಾಧಿಯಾಗಿರುವ ಸಾಧ್ಯತೆ ಇದೆ.
ಆದ್ದರಿಂದ ಈ ಹಿಂದೆ ನಡೆದ ಇಂತಹ ಪ್ರಕರಣದ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದು ರಾತ್ರಿ 9.30ರ ಸುಮಾರಿಗೆ ಆರೋಪಿ ಸಂತ್ರಸ್ಥೆಯ ಮನೆಯ ಬಾಗಿಲು ಬಡಿದಿದ್ದಾನೆ. ಮಹಿಳೆ ಬಾಗಿಲು ತೆರೆದಾಗ ಒಳನುಗ್ಗಿದ ಆತ ಚಾಕು ತೋರಿಸಿ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆÉ ಎಂದು ಪೆÇಲೀಸರು ತಿಳಿಸಿದ್ದಾರೆ.