![somali bomb blast](http://kannada.vartamitra.com/wp-content/uploads/2018/11/somali-bomb-blast-635x381.jpg)
ಮೊಗದಿಶು: ಸೊಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ನಡೆಸಿದ ಕಾರ್ ಬಾಂಬ್ ಸ್ಫೋಟದಲ್ಲಿ 52 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೊಗದಿಶುವಿನ ಸಹಾಫಿ ಹೋಟೆಲ್ ಬಳಿ ಕೇವಲ ಒಂದು ನಿಮಿಷದ ಅವಧಿಯಲ್ಲಿ ಎರಡು ಬಾಂಬ್ ಗಳನ್ನು ಸ್ಫೋಟಿಸಲಾಗಿದೆ. ಈ ಹೋಟೆಲ್ ಸೋಮಾಲಿಯಾ ಪೊಲೀಸ್ ಫೋರ್ಸ್ನ ಸಿಐಡಿ ಮುಖ್ಯಕಚೇರಿ ಸಮೀಪವೇ ಇದ್ದು, ನಾಲ್ವರು ಉಗ್ರರು ಒಮ್ಮೆಲೇ ಹೋಟೆಲ್ ನ ಮೇಲ್ಛಾವಣಿಗೆ ಹೋಗಿ ಅಲ್ಲಿಂದ ಕೆಳಗೆ ಕುಳಿತಿರುವ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಉಗ್ರರನ್ನು ಹತ್ಯೆಗೈದು ಹೋಟೆಲ್ ರೂಮಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಬಳಿಕ ಹೋಟೆಲ್ ಬಳಿಯೇ ಎರಡು ಬಾಂಬ್ ಗಳು ಸ್ಫೋಟಗೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದು ಅಲ್-ಶಬಾಬ್ ಉಗ್ರಸಂಘಟನೆಯ ಕೃತ್ಯ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ ಎಂದು ಸೋಮಾಲಿಯಾ ಸರ್ಕಾರ ಹೇಳಿದೆ.
Somalia,terrorist, bomb blasts,52 death