ಲಖನೌ: ಉತ್ತರ ಪ್ರದೇಶದ ಇನ್ನೂ ಹಲವು ನಗರಗಳ ಹೆಸರು ಶೀಘ್ರದಲ್ಲಿಯೇ ಬದಲಾಗಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಹೇಳಿದೆ.
ಈಗಾಗಲೆ ಅಲಹಾಬಾದ್ ಹಾಗೂ ಫೈಜಾಬಾದ್ ಹೆಸರುಗಳನ್ನು ಪ್ರಯಾಗ್ ರಾಜ್, ಅಯೋಧ್ಯೆ ಬದಲಿಸಲಾಗಿದ್ದು, ಇನ್ನೂ ಹಲವು ನಗರಗಳ ಹೆಸರನ್ನು ಕೂಡ ಸರ್ಕಾರ ಶೀಘ್ರ ಬದಲಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ ಸಂಗೀತ್ ಸೋಮ್ ಹೇಳಿದ್ದಾರೆ.
ಹಲವು ಜಿಲ್ಲೆಗಳ ಹೆಸರನ್ನು ಮೂಲ ಹೆಸರಿಗೆ ಬದಲಾಯಿಸುವಂತೆ ಜನರು ಸಾಕಷ್ಟು ವರ್ಷಗಳಿಂದ ಆಗ್ರಹಿಸುತ್ತಲೇ ಇದ್ದಾರೆ, ಹೀಗಾಗಿ ರಾಜ್ಯದಲ್ಲಿರುವ ಹಲವು ನಗರಗಳ ಹೆಸರನ್ನು ಬದಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಜಾಫರ್ ನಗರವನ್ನು ಲಕ್ಷ್ಮಣ ನಗರವೆಂದು ಹೆಸರಿಡಲಾಗುತ್ತದೆ ಎಂದು ಹೇಳಿದ್ದಾರೆ.
ಮುಘಲರ ಆಡಳಿತದಲ್ಲಿ ನಡೆದಿರುವ ಅಸ್ಪಷ್ಟತೆಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ಸರಿಪಡಿಸಲಿದೆ. ಕಳೆದುಕೊಂಡಿದ್ದ ಸಂಪ್ರದಾಯಗಳನ್ನು ಮತ್ತೆ ಮರುಸ್ಥಾಪನೆ ಮಾಡಲು ನಮ್ಮ ಸರ್ಕಾರ ಯತ್ನಿಸುತ್ತಿದೆ ಈ ನಿಟ್ಟಿನಲ್ಲಿ ನಗರಗಳಿಗೆ ಹಳೇಯ ಹೆಸರನ್ನೇ ಪುನರ್ ನಾಮಕರಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Uttar preadesh,CM Yogi adityanath, City name, change