ಶಾಲಾ ವಾಹನಕ್ಕೆ ರೈಲು ಡಿಕ್ಕಿ: ಉತ್ತರ ಪ್ರದೇಶದಲ್ಲಿ 13 ಮಕ್ಕಳು ದಾರುಣ ಸಾವು

ಲಖನೌ:ಏ-೨೬: ಉತ್ತರ ಪ್ರದೇಶದಲ್ಲಿ ಶಾಲಾವಾಹನಕ್ಕೆ ರೈಲು ಢಿಕ್ಕಿಯಾದ ಪರಿಣಾಮ 13 ಮಕ್ಕಳು ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಖುಷಿನಗರ ಪಟ್ಟಣದ ಸಮೀಪದ ದೂಧಿ ಎಂಬಲ್ಲಿ ಗುರುವಾರ ಬೆಳಗ್ಗೆ ಈ ದುರ್ಘಟನೆ ನಡೆದಿದ್ದು, ಇಲ್ಲಿನ ಕಾವಲು ರಹಿತ ಲೆವೆಲ್​ ಕ್ರಾಸಿಂಗ್​ನಲ್ಲಿ ಸ್ಕೂಲ್​ ವ್ಯಾನಿಗೆ ರೈಲು ಡಿಕ್ಕಿಹೊಡೆದಿದೆ. 13 ಮಕ್ಕಳು ಮೃತಪಟ್ಟಿದ್ದು, ಅಂತೆಯೇ ಘಟನೆಯಲ್ಲಿ ಹಲವು ಮಕ್ಕಳು ಗಾಯಗೊಂಡಿದ್ದಾರೆ.

ಶಾಲಾ ವಾಹನದಲ್ಲಿ ಸುಮಾರು 20 ರಿಂದ 30 ಮಂದಿ ಮಕ್ಕಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸಂತ್ರಸ್ಥರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 2 ಲಕ್ಷ ಪರಿಹಾರ ಘೋಷಿಸಿದೆ.

ಇನ್ನು ಅಪಘಾತ ದುರಂತಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ಥರ ಕಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ.

ಶಾಲಾ ವಾಹನಕ್ಕೆ ರೈಲು ಡಿಕ್ಕಿಹೊಡೆದು ಮಕ್ಕಳು ಸಾವನ್ನಪ್ಪಿರುವ ದರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

Train Hits School Van,13 Children Killed, Uttar Pradesh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ