ಇನ್ನೇಕೆ ಕಾಯಬೇಕು?

ಶ್ರೀರಾಮಜನ್ಮಭೂಮಿಯಲ್ಲಿ ಭವ್ಯಮಂದಿರ ನಿರ್ಮಾಣ ವಿವಾದದ ವಿಚಾರಣೆಯ ಸ್ಥೂಲ ಬೆಳವಣಿಗೆಗಳು:

1991 – ಪ್ರಧಾನಿ ಚಂದ್ರಶೇಖರ್ ಅವಧಿಯಲ್ಲಿ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಆಲ್ ಇಂಡಿಯಾ ಬಾಬರಿ ಮಸ್ಜಿದ್ ಕಮಿಟಿಯ ಸದಸ್ಯರು ಎತ್ತಿದ ಉದ್ಗಾರ

ಬಾಬರಿ ಮಸೀದಿಯನ್ನು ಸರಯೂ ನದಿಯ ದಡದ ಬಂಜರು ಭೂಮಿಯಲ್ಲಿ ಕಟ್ಟಲಾಗಿತ್ತು. ಹಾಗೇನಾದರೂ ಅದು ಮಂದಿರದ ಭಾಗವೆಂದು ನಿಶ್ಚಿತವಾದರೆ ನಾವು ಸ್ವಇಚ್ಚೆಯಿಂದ ಅದನ್ನು ಹಿಂದುಗಳಿಗೆ ಮರಳಿಸುತ್ತೇವೆ.

1993 – ರಾಷ್ಟ್ರಾಧ್ಯಕ್ಷರು ತಮ್ಮ ಸಂವಿಧಾನದತ್ತ ಅಧಿಕಾರವನ್ನು ಬಳಸಿ ಸರ್ವೋಚ್ಚ ನ್ಯಾಯಾಲಯದಿಂದ ಬಯಸಿದ ಸಲಹೆ

ವಿವಾದಿತ ಕಟ್ಟಡವಾದ ಬಾಬರಿ ಮಸೀದಿಯ ನಿರ್ಣಯಕ್ಕೆ ಮೊದಲು ಅಲ್ಲಿ ಹಿಂದೂ ಮಂದಿರವಿದ್ದೀತೇ?

1994 – ರಾಷ್ಟ್ರಾಧ್ಯಕ್ಷರು ಈ ಸಲಹೆಯನ್ನು ಅಪೇಕ್ಷಿಸಲು ಕಾರಣವೇನು ಎಂದು ಉಚ್ಚ ನ್ಯಾಯಾಲಯವು ಕೇಳಿದಾಗ
ಭಾರತದ ಸೊಲಿಸಿಟರ್ ಜನರಲ್ ರವರು ಪ್ರಮಾಣಪತ್ರದ ಮೂಲಕ ನೀಡಿದ ಉತ್ತರ ಮೇಲಿನ ಪ್ರಶ್ನೆಗೆ ಹೌದು ಎನ್ನುವ ಸಕಾರಾತ್ಮಕ ಉತ್ತರವಾದರೆ: ಸರ್ಕಾರವು ಹಿಂದೂ ಸಮಾಜದ ಭಾವನೆಗಳನ್ನು ಅರ್ಥೈಸಿಕೊಂಡು ವಿವಾದಿತ ಪ್ರದೇಶವನ್ನು ಸಂಮಾನಪೂರ್ವಕವಾಗಿ ಹಿಂದುಗಳಿಗೆ ಮರಳಿಸುವ ಕ್ರಮವನ್ನು
ಕೈಗೊಳ್ಳುತ್ತದೆ. ಅದು ಮಸೀದಿ ಎಂದಾದರೆ: ಅದನ್ನು ಮುಸ್ಲಿಂ ಸಮಾಜಕ್ಕೆ ಒಪ್ಪಿಸಲಾಗುವುದು.

2003 – ರಾಷ್ಟ್ರಾಧ್ಯಕ್ಷರು ಕೋರಿದ ಸಲಹೆಗಳ ಕುರಿತು ಉತ ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು
ಉಚ್ಚನ್ಯಾಯಾಲಯದ ಲಕ್ನೋಪೀಠಕ್ಕೆ ನೀಡಿದ ನಿರ್ದೇಶನದ ಕಾರ್ಯಾನ್ವಯ ವಿವಾದಿತ ಪ್ರದೇಶದಲ್ಲಿ ನೆಲದಾಳದ ಚಿತ್ರಗಳನ್ನು ತೆಗೆದು ವರದಿಯನ್ನು ನೀಡುವಂತೆ ಕೆನಡಾ ದೇಶದ ರಾಡಾರ್ ತಜ್ಞತೆಯ ಸಂಸ್ಥೆಗೆ ಲಕ್ನೋಪೀಠವು ಉಚ್ಚನ್ಯಾಯಾಲಯದ ಆದೇಶವನ್ನು ನೀಡಿತು.

ಜಿ.ಪಿ.ಆರ್. ಸರ್ವೆಯನ್ನು ಮಾಡಿದ ಕೆನಡಾದ ತಜ್ಞರ ವರದಿ:

ವಿವಾದಿತ ಪ್ರದೇಶದ ಅಡಿಯಲ್ಲಿ ಪ್ರಾಚೀನ ಕಟ್ಟಡದ ಅವಶೇಷಗಳಿವೆ. ಕಂಬಗಳು, ಅಡಿಪಾಯದ ಕಲ್ಲುಗಳು,
ನೆಲಹಾಸು, ಗೋಡೆ – ಹೀಗೆ ವಿಶಾಲ ಕಟ್ಟಡವೊಂದರ ಸ್ಪಷ್ಟ ಕುರುಹುಗಳು ಕಂಡುಬರುತ್ತಿವೆ.

ಜಿ.ಪಿ.ಆರ್. ಸರ್ವೇಯ ವರದಿಯನ್ನು ದೃಢೀಕರಿಸಲು ಉಚ ್ಚ ನ್ಯಾಯಾಲಯದ ಆದೇಶದಂತೆ ಆ ಪ್ರದೇಶದಉತ್ಖನನವನ್ನು ಕೈಗೊಂಡ ಪ್ರಾಚ್ಯ ಸಂಶೋಧನಾ ಇಲಾಖೆಯಪರಿಣಿತರ ಎರಡು ಸಂಪುಟಗಳ ವರದಿಯಿಂದ ಆಯ್ದ ಸಾಲುಗಳು:

ವಿವಾದಿತ ಸ್ಥಳದ ನೆಲದಾಳದಲ್ಲಿ ಕಾಣುವ 10ನೇ ಶತಮಾನದಿಂದ ನಿರ್ಮಿಸಲು ಪ್ರಾರಂಭಿಸಿದ ವಿಶಾಲ ಭವನವು ಉತ್ತರ ಭಾರತದ ದೇವಸ್ಥಾನಗಳ ಶೈಲಿಯಲ್ಲಿದೆ. ಅಲಂಕೃತ ಗೋಡೆಗಳು, ಭಗ್ನಶಿಲ್ಪಗಳು, ಅಷ್ಟಭುಜಾಕೃತಿಯ ಫಲಕಗಳು, ಐವತ್ತು ಕಂಬಗಳ ಬೃಹತ್‍ಕಟ್ಟಡದ ಅವಶೇಷಗಳಿವೆ.

2010 – ಶ್ರೀರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ದಾವೆಯಲ್ಲಿ ಲಕ್ನೋ ಉಚ್ಚನ್ಯಾಯಾಲಯದತೀರ್ಪು:
ಆ ಪ್ರದೇಶದಲ್ಲಿದ್ದ ಪ್ರಾಚೀನ ನಿರ್ಮಾಣವನ್ನು ಉರುಳಿಸಿ ವಿವಾದಿತ ಕಟ್ಟಡವನ್ನು ಕಟ್ಟಲಾಗಿತ್ತು. ಪ್ರಾಚ್ಯ ಸಂಶೋಧನಾ ಸಂಸ್ಥೆಯು ಒದಗಿಸಿದ ಸಾಕ್ಷ್ಯ-ಪುರಾವೆಗಳು ಅಲ್ಲಿದ್ದ ಪುರಾತನ ಕಟ್ಟಡವು ಹಿಂದೂ ಧಾರ್ಮಿಕ ಸ್ಥಾನವಾಗಿತ್ತು ಎನ್ನುವುದನ್ನು ದೃಢಪಡಿಸಿವೆ.
– ನ್ಯಾಯಮೂರ್ತಿ ಧರ್ಮವೀರ ಶರ್ಮಾ

ಮೂರು ಗುಂಬಜಗಳ ಕಟ್ಟಡವನ್ನು ಖಾಲಿ ಜಾಗದಲ್ಲಿ ಕಟ್ಟಿರಲಿಲ್ಲ. ಅದನ್ನು ಹಿಂದು ಮಂದಿರದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎನ್ನುವುದು ಸಂಶಯಾತೀತ.
_ ನ್ಯಾಯಮೂರ್ತಿ ಸುಧೀರ್ ಅಗರ್‍ವಾಲ್

ಈಗ ಪೂಜೆಗೊಳ್ಳುತ್ತಿರುವ ಶ್ರೀರಾಮಲಲ್ಲಾನ ವಿಗ್ರಹವಿರುವುದು ರಾಮಜನ್ಮಸ್ಥಾನದಲ್ಲಿ. ಹಾಗಾಗಿ ಅದನ್ನು
ಹಿಂದುಗಳಿಗೆ ಒಪ್ಪಿಸಬೇಕು.
– ನ್ಯಾಯಮೂರ್ತಿ ಎಸ್.ಯು.ಖಾನ್.

ಹಿಂದೂ ಮಂದಿರವನ್ನು ದ್ವಂಸಮಾಡಿ ವಿವಾದಿತ ಕಟ್ಟಡವನ್ನು ಕಟ್ಟಲಾಗಿದೆ. ಇದು ಖುರಾನ್ ಪ್ರಕಾರ ಸಮ್ಮತವಲ್ಲ.
ಆದುದರಿಂದ ಅದನ್ನು ಮಸೀದಿ ಎನ್ನುವಂತಿಲ್ಲ.
– ನ್ಯಾಯಮೂರ್ತಿ ಧರ್ಮವೀರ ಶರ್ಮಾ

ಇಷ್ಟಿದ್ದರೂ ವಿವಾದದ ತೀರ್ಪು ಬರುತ್ತಿಲ್ಲವೇಕೆ?
ಶ್ರೀ ರಾಮಜನ್ಮಭೂಮಿಯ ವಿವಾದದ ಅಂತಿಮ ತೀರ್ಪು ಶ್ರೀರಾಮಭಕ್ತರ ಪರವಾಗಲಿದೆ ಎನ್ನುವುದಕ್ಕಾಗಿಯೇ ಸಂದಿಗ್ಧ ಸ್ಥಿತಿಯನ್ನು ಉಂಟುಮಾಡಲಾಗುತ್ತಿದೆಯೇ?

ಸಂತ ಸಮಾಜದ ಆಗ್ರಹ

5-6-2017 – ಶ್ರೀ ರಾಮ ಮಂದಿರ – ಬಾಬರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಪ್ರಾರಂಭಿಸುತ್ತಿದ್ದಂತೆ, ಸುನ್ನಿ ವಕ್ಫ್ ಬೋರ್ಡ್ ಮತ್ತು ಬಾಬರಿ ಮಸೀದಿ ಆಕ್ಷನ್ ಕಮಿಟಿಯ ವಕೀಲರೂ, ಕಳೆದ ಯುಪಿಎ ಸರ್ಕಾರದ ಮಂತ್ರಿಗಳೂ ಆದ ಕಪಿಲ್ ಸಿಬಾಲ್‍ರವರು, ವಿಚಾರಣೆಯನ್ನು 2019ರ ಲೋಕಸಭಾ ಚುನಾವಣೆಯ ನಂತರ ಕೈಗೆತ್ತಿಕೊಳ್ಳುವಂತೆ ವಿನಂತಿಸಿದರು. ಆದರೆ ದಿನದಿನವೂ ತ್ವರಿತ ವಿಚಾರಣೆಯು ನಡೆದು ಬಹುಕಾಲದಿಂದ ನೆನೆಗುದಿಗೆ ಬಿದ್ದ ಪ್ರಕರಣದ ತೀರ್ಪು ಬರಲಿ ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿತು.

29-10-2018: ಸರ್ವೋಚ್ಚ ನ್ಯಾಯಾಲಯವು ಈ ದಿನ ವಿಚಾರಣೆಯನ್ನು ಕೈಗೊಳ್ಳುತ್ತಿದ್ದಂತೆ ಎರಡು ನಿಮಿಷಗಳಲ್ಲಿ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿತು. “ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನೂ ಮಹತ್ವದ ವಿಚಾರಗಳು ವಿಚಾರಣೆಗೆ ಉಳಿದಿವೆ. ಹಾಗಾಗಿ ಈ ವಿವಾದದ ತ್ವರಿತ ವಿಚಾರಣೆಯ ದಿನವನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ವಿಚಾರಣೆಯ ಪೀಠವನ್ನು 2019 ಜನವರಿ ತಿಂಗಳಲ್ಲಿ ರಚಿಸಲಾಗುವುದು. ಆ ಪೀಠವು ವಿಚಾರಣೆಯ ದಿನಗಳನ್ನು  ನಿರ್ಧರಿಸುವುದು. ಅದನ್ನು ಜನವರಿಯಲ್ಲೋ, ಫೆಬ್ರವರಿಯಲ್ಲೋ, ಮಾರ್ಚ್ ಅಥವಾ ಏಪ್ರಿಲ್‍ನಲ್ಲೋ ನಿಗದಿಪಡಿಸುವುದು ಆ ಪೀಠದ
ಹೊಣೆ”ಎಂದು ಘೋಷಿಸಿತು.

ಜಗತ್ತಿನ 125 ಕೋಟಿ ಹಿಂದುಗಳ ಭಾವನೆಗೆ ಸರ್ವೋಚ್ಚ ನ್ಯಾಯಾಲಯವು ನೀಡಿದ ಪ್ತಶಸ್ತಿಪತ್ರವಿದು. ಹಿಂದುಗಳ ಸಹನೆ-ಸಹಿಷ್ಣುತೆ-ತಾಳ್ಮೆಗಳನ್ನು ಪರೀಕ್ಷಿಸಿದ ಕ್ಷಣವಿದು. ಐದು ಶತಮಾನಗಳ ಸಂಘರ್ಷವು ಮಂಗಲಕರವಾಗಿ ಕೊನೆಯಾಗುವುದೆಂದು ನಿರೀಕ್ಷಿಸುತ್ತಿದ್ದ ಹಿಂದೂ ಸಮಾಜವನ್ನು ಸರ್ವೋಚ್ಚ ನ್ಯಾಯಾಲಯವು ಇಷ್ಟೊಂದು ಹಗುರವಾದ ಉದ್ಗಾರದಿಂದ ಅವಮಾನಿಸಬಾರದಾಗಿತ್ತು.

ಈಗ ಸಂತ ಸಮೂಹದ ಆದೇಶ ಹಿಂದೂ ಭಾವನೆಗಳನ್ನು ಕೆಣಕುವ ಪ್ರಸಂಗಗಳು ಇನ್ನು ಮುಂದೆ ಮರುಕಳಿಸಬಾರದು.

ಜನ್ಮಭೂಮಿ ಮಂದಿರ ನಿರ್ಮಾಣಕ್ಕಿರುವ ಎಲ್ಲಾ ಅಡೆತಡೆಗಳನ್ನು ಸಂಸತ್ತಿನಲ್ಲಿ ಮಸೂದೆಯ ಮೂಲಕ ನಿವಾರಿಸಬೇಕು. ಮುಸ್ಲಿಂ ಸಮಾಜವು ತಾನೇ ನೀಡಿದ ವಚನದಂತೆ ಸ್ವ ಇಚ್ಚೆಯಿಂದ ಜನ್ಮಸ್ಥಾನದ ಸ್ಥಳವನ್ನು ಹಿಂದು ಸಮಾಜಕ್ಕೆ ನೀಡಲಿ.

ಭಾರತ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ ಪ್ರಮಾಣಪತ್ರದಂತೆ ಜನರ ಭಾವನೆಯನ್ನು ಮನ್ನಿಸಿ 1993ರಲ್ಲಿ ಸಾಧೀನ ಪಡಿಸಿದ 70 ಎಕರೆ ಭೂಮಿಯನ್ನು ಮಂದಿರ ನಿರ್ಮಾಣಕ್ಕಾಗಿ ಒಪ್ಪಿಸಲಿ.

ಅಯೋಧ್ಯೆಯ ಸಾಂಸ್ಕøತಿಕ ಪರಿಧಿಯೊಳಗೆ ಯಾವುದೇ ಮಸೀದಿ ಅಥವಾ ಇಸ್ಲಾಮೀ ಸಾಂಸ್ಕøತಿಕ ಕೇಂದ್ರದ ಮತ್ತು ಸ್ಮಾರಕಗಳ ನಿರ್ಮಾಣವಾಗಬಾರದು.

ಜನಮನ್ನಣೆಗಳಿಸಿದ ಜನ್ಮಭೂಮಿ ರಾಮಮಂದಿರದ ನಕ್ಷೆಯಂತೆಯೇ – ಸಂಗ್ರಹಿಸಿದ ಇಟ್ಟಿಗೆಗಳಿಂದಲೇಕೆತ್ತಿದ ಕಲ್ಲುಗಳಿಂದಲೇ – ಈ ಉದ್ದಕ್ಕೂ ಸಂಘರ್ಷಕ್ಕಿಳಿದ ಸಂತರ ನೇತೃತ್ವದಲ್ಲಿಯೇ ಮಂದಿರದನಿರ್ಮಾಣವಾಗಬೇಕು.

ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಸ್ಥಾನದಲ್ಲಿ ಭವ್ಯ ಶ್ರೀರಾಮ ಮಂದಿರದ ನಿರ್ಮಾಣವು ಕೋಟ್ಯಂತರ ಹಿಂದುಗಳ ಶ್ರದ್ಧೆ, ನಂಬಿಕೆ, ಮಹದಾಸೆ, ಹೆಮ್ಮೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದೆ.

ಈ ಕಾರ್ತೀಕ ಮಾಸದಲ್ಲಿ ನಾವು ಬೆಳಗುವ ಪ್ರತಿ ಜ್ಯೋತಿಯೂ ಭವ್ಯ ಶ್ರೀರಾಮ ಮಂದಿರದ ನಿರ್ಮಾಣದ ಆರಂಭದ ಮುನ್ಸೂಚನೆಯಾಗಲಿ.

Rama mandira,Vishwa hindu pariShat

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ