ಆರ್ಟ್ ಆಫ್ ಲಿವಿಂಗ್ ಕಾರ್ಯಾಗಾರ ಮೊರೆ ಹೋದ ಸಿಬಿಐ…

ನವದೆಹಲಿ: ಸಿಬಿಐ ಅಧಿಕಾರಿ ವರ್ಗದವರಲ್ಲಿ “ಸಕಾರಾತ್ಮಕ ಮನೋಭಾವನೆ” ಹೆಚ್ಚಳ ಮಾಡುವುದಕ್ಕಾಗಿ ಮೂರು ದಿನಗಳ ಕಾಲ ಆರ್ಟ್ ಆಫ್ ಲಿವಿಂಗ್ ಕಾರ್ಯಾಗಾರ ನಡೆಸಲು ಸಂಸ್ಥೆ ಮುಖ್ಯಸ್ಥರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ನಾಳೆಯಿಂದ ಮೂರು ದಿನಗಳ ಕಾಲ ನವದೆಹಲಿಯಲ್ಲಿ ನಡೆಯಲಿರುವ ಶ್ರೀ ಶ್ರೀ ರವಿಶಂಕರ್ ಗುರುಜಿ ನೇತೃತ್ವದ ಕಾರ್ಯಾಗಾರದಲ್ಲಿ 150 ಕ್ಕಿಂತ ಹೆಚ್ಚು ಸಿಬಿಐ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸಿಬಿಐ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿಗಳು, ಇನ್ ಚಾರ್ಜ್ ನಿರ್ದೇಶಕರುಗಳು ಶಿಬಿರದಲ್ಲಿ ಬಾಗವಿಸಲಿದ್ದಾರೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಮೇಲೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತನಾ ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧ ಸಿವಿಸಿ ಎದುರು ವಿಚಾರಣೆಗೆ ಹಾಜರಾಗಿದ್ದರು.ಈ ನಡುವೆ ಸಂಸ್ಥೆಯು ಅಸ್ತಾನಾ ಹಾಗೂ ಅಲೋಕ್ ವರ್ಮಾ ಅವರನ್ನು ಸುದೀರ್ಘ ರಜೆ ಮೇಲೆ ಕಳಿಸಿರುವುದು ತೀವ್ರ ವಿವಾದಕ್ಕೆ ಎಡೆಮಾಡಿದೆ. ಅಲ್ಲದೆ ಪ್ರಧಾನಿ ನೇತೃತ್ವದ ಸಮಿತಿಯು ಎಂ.ನಾಗೇಶ್ವರ ರಾವ್ ಅವರನ್ನು ತನಿಖಾ ಸಂಸ್ಥೆಯ ಮದ್ಯಂತರ ಮುಖ್ಯಸ್ಥರಾಗಿ ನೇಮಕ ಮಾಡಿ ಸುದ್ದಿಗೆ ಗ್ರಾಸವಾಗಿತ್ತು.

ಸಂಸ್ಥೆಯಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳಿಂದ ಅಧಿಕಾರಿಗಳ ಮನಸ್ಸಿನಲ್ಲಿ ಮೂಡಿದ ನಕಾರಾತ್ಮಕ ಮನೋಭಾವನೆ ತೊಲಗಿಸಲು ಈಗ ಆರ್ಟ್ ಆಫ್ ಲಿವಿಂಗ್ ಕಾರ್ಯಾಗಾರದ ಮೊರೆ ಹೋಗಲು ನಿರ್ಧರಿಸಲಾಗಿದೆ.

CBI,art of living workshop, Sri Sri Ravi Shankar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ