ನವದೆಹಲಿ:ನ-4: ಪಂಜಾಬ್ ನಲ್ಲಿ ಉಗ್ರರ ಕೃತ್ಯ ಹೆಚ್ಚಳಕ್ಕೆ ಬಾಹ್ಯಶಕ್ತಿಗಳು ಯತ್ನಿಸುತ್ತಿವೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ರಕ್ಷಣಾ ವಿಭಾಗ ಚಿಂತರಕ ಛಾವಡಿಯಲ್ಲಿ ಮಾತನಾಡಿದ ಅವರು, ಅಸ್ಸಾಂ ಮತ್ತು ಪಂಜಾಬ್ ನಲ್ಲಿ ಭಯೋತ್ಪಾಧಕ ಕೃತ್ಯಗಳನ್ನು ನಡೆಸಿ, ಶಾಂತಿ-ಸುವ್ಯವಸ್ಥೆ ಹದಗೆಡುವಂತೆ ಮಾಡಲು ಬಾಹ್ಯ ಶಕ್ತಿಗಳು ಹವಣಿಸುತ್ತಿದ್ದು, ರಾಜ್ಯದಲ್ಲಿ ಶಾಂತಿ ಕದದದಂತೆ ನಾವು ಕಟ್ಟೆಚ್ಚರದಿಂದ ಇರಬೇಕಾದ ಅಗತ್ಯವಿದೆ ಎಂದರು.
ಪಂಜಾಬ್ ಸದ್ಯ ಶಾಂತಿಯುತವಾಗಿದೆ. ಆದರೆ ಬಾಹ್ಯಶ್ಯಕ್ತಿಗಳು ಗಲಭೆ ಸೃಷ್ಠಿಸಲು ಯತ್ನಿಸಿವೆ. ಪಂಜಾಬ್ನಲ್ಲಿ ಕೆಲಸ ಮುಗಿಯಿತು ಎಂದು ಅಲಕ್ಷ್ಯ ಮಾಡಿ ಕಣ್ಣು ಮುಚ್ಚಿ ಕುಳಿತರೆ ಪರಿಸ್ಥಿತಿ ಕೈಮೀರಲಿದೆ. ದೇಶದ ಆಂತರಿಕ ಸಮಸ್ಯೆಗಳಿಗೆ ಬಾಹ್ಯ ಸಂಪರ್ಕಗಳು ಇರುವ ಕಾರಣ ಪರಿಹಾರ ಕಂಡುಕೊಳ್ಳಲು ಬಹಳ ಕಷ್ಟವಾಗುತ್ತಲೇ ಬಂದಿದೆ. ದೇಶ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಕೇವಲ ಮಿಲಿಟರಿಯಿಂದ ಸಾಧ್ಯವಿಲ್ಲ. ಇದಕ್ಕೆ ಸರ್ಕಾರದ ಎಲ್ಲ ಸಂಸ್ಥೆಗಳು, ಸಾರ್ವಜನಿಕ ಆಡಳಿತ, ಪೊಲೀಸ್ ಇಲಾಖೆಗಳೊಂದಿಗೆ ಸಾರ್ವಜನಿಕ ವಲಯ ಕೂಡ ಕೈಜೋಡಿಸಬೇಕಿದೆ ಎಂದು ಹೇಳಿದ್ದಾರೆ.
Indian Army, Bipin Rawat,Assam, Punjab