ಉಪಚುನಾವಣಾ ಸಮರ: ಮಧ್ಯಾಹ್ನ 1ಗಂಟೆ ವರೆಗಿನ ಶೇಕಡಾವಾರು ಮತದಾನ

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.

ಮಧ್ಯಾಹ್ನ 1 ಗಂಟೆವರೆಗೆ ಶಿವಮೊಗ್ಗದಲ್ಲಿ ಶೇ. 30.20, ಬಳ್ಳಾರಿ: ಶೇ. 35.72, ಮಂಡ್ಯ: ಶೇ. 26.80, ರಾಮನಗರ: ಶೇ. 39.81 ಹಾಗೂ ಜಮಖಂಡಿ: ಶೇ. 43.50 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ.24.17, ಮಳವಳ್ಳಿಯಲ್ಲಿ ಶೇ.24.18, ಮೇಲುಕೋಟೆಯಲ್ಲಿ ಶೇ.28.02, ಕೆ.ಆರ್.ಪೇಟೆಯಲ್ಲಿ ಶೇ.27.39, ಮದ್ದೂರಲ್ಲಿ ಶೇ.30.88, ಶ್ರೀರಂಗಪಟ್ಟಣದಲ್ಲಿ ಶೇ.25.85, ನಾಗಮಂಗಲದಲ್ಲಿ ಶೇ.31.82, ಕೆ.ಆರ್.ನಗರದಲ್ಲಿ ಶೇ.22.05 ರಷ್ಟು ಮತದಾನವಾಗಿದೆ.

Byelections,3-Lok-Sabha, 2-assembly,voting

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ