
ಸಿಡ್ನಿ : ಹತ್ತು ವಷರ್ಗಳ ಹಿಂದೆ ವಿಶ್ವ ಕ್ರಿಕೆಟ್ನಲ್ಲಿ ಭಾರೀ ಸದ್ದು ಮಾಡಿದ್ದ ಮಂಕಿ ಗೇಟ್ ಪ್ರಕರಣದ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಆ್ಯಂಡ್ರಿವ್ ಸೈಮಂಡ್ಸ್ ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೈಮಂಡ್ಸ್ , ಹರ್ಭಜನ್ ನನ್ನನ್ನ ಎರಡು ಮೂರು ಬಾರಿ ಮಂಕಿ ಎಂದು ಕರೆದಿದ್ದಾರೆ. ಮಂಕಿಗೇಟ್ ಪ್ರಕರಣದ ನಂತರ ಕುಸಿದು ಬಿದ್ದು ಹೆಚ್ಚು ಹೆಚ್ಚು ಕುಡಿಯುತ್ತಿದ್ದೆ ಇದರ ಪರಿಣಾಮವೇ ಜೀವನೋತ್ಸಾಹ ಕಳೆದುಕೊಂಡೆ ಎಂದಿದ್ದಾರೆ. ಜನಾಂಗೀಯ ನಿಂದನೆ ಪ್ರಕರಣರದಲ್ಲಿ ತಂಡದ ಆಟಗಾರರನ್ನು ಒಳಗೊಳ್ಳುವಂತೆ ಮಾಡಿದ್ದು ನನಗೆ ಒತ್ತಡಕ್ಕೆ ಸಿಲುಕುವಂತೆ ಮಾಡಿತು ನೆನೆದಿದ್ದಾರೆ.
2008ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಆಲ್ರೌಂಡರ್ ಆ್ಯಂಡ್ರಿವ್ ಸೈಮಂಡ್ಸ್ ತನ್ನನ್ನ ಮಂಕಿ ಎಂದು ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿ ದೂರು ಕೊಟ್ಟಿದ್ದರು. ಆ ಸಂದರ್ಭದಲ್ಲಿ ಈ ಪ್ರಕರಣ ಭಾರೀ ವಿವಾದ ಎಬ್ಬಿಸಿತು. ಅಂದು ಇಡೀ ವಿಶ್ವ ಕ್ರಿಕೆಟ್ ಸಿಡ್ನಿಯತ್ತ ನೋಡಿತ್ತು. ಪ್ರಕರಣದ ಬಗ್ಗೆ ಹರ್ಭಜನ್ ಸಿಂಗ್ ಮಾತ್ರ ತಪ್ಪು ಮಾಡಿಲ್ಲ ಎಂದು ಹೇಳಿದರು.
ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಐಸಿಸಿ ಹಭರ್ಜನ್ ಸಿಂಗ್ ಗೆ ಆಜೀವ ನಿಷೇಧ ಏರಲು ಮುಂದಾಗಿತ್ತು. ಶಿಕ್ಷೆ ವಿರುದ್ಧ ಪ್ರತಿಭಟಿಸಿದ ಟೀಂ ಇಂಡಿಯಾ ಆಟಗಾರರು ಸರಣಿಯಿಂದ ಹೊರ ನಡೆಯೋದಾಗಿ ಬೆದರಿಕೆ ಹಾಕಿದರು. ನಂತರ ಮೂರು ಪಂದ್ಯಗಳ ಅಮಾನತು ಶಿಕ್ಷೆಯನ್ನ ನೀಡಿತ್ತು .