ಐಸಿಸಿ ಏಕದಿನ ರಾಂಕಿಂಗ್ : ನಂ.1 ಕೊಹ್ಲಿ , ನಂ.2 ರೋಹಿತ್

ದುಬೈ: ವಿಂಡೀಸ್ ವಿರುದ್ಧ ರನ್ ಮಳೆ ಸುರಿಸಿ ಹಲವಾರು ವಿಶ್ವ ದಾಖಲೆಗಳನ್ನ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬಡುಗಡೆ ಮಾಡಿರುವ ರಾಂಕಿಂಗ್​ನಲ್ಲಿ ನಂ.1 ಸ್ಥಾನದಲ್ಲೆ ಮುಂದುವರೆದಿದ್ದಾರೆ. ಯಾರ್ಕರ್ ಸ್ಪೆಶಲಿಸ್ಟ್ ಜಸ್​ಪ್ರೀತ್ ಬುಮ್ರಾ ವೃತ್ತಿ ಜೀವನದಲ್ಲಿ ಅಮೋಘ ಪ್ರದರ್ಶನ ನೀಡಿ ಮತ್ತೆ ಅಗ್ರಸ್ಥಾನಕ್ಕೆರಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ ಹ್ಯಾಟ್ರಿಕ್ ಶತಕ ಬಾರಿಸಿದ ತಂಡದ ಮೊದಲ ಬ್ಯಾಟ್ಸ್​ಮನ್ ಎಂಬ ಗೌರವಕ್ಕೆ ಪಾತ್ರರಾದ್ರು. ನಂತರ ಅತಿ ವೇಗವಾಗಿ ಹತ್ತು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ರು. ಇದೀಗ 899 ಅಂಕಗಳೊಂದಿಗೆ ಕೊಹ್ಲಿ ಮತ್ತೆ ಅಗ್ರಸ್ಥಾನ ಕಾಯ್ದಕೊಂಡ್ರು. ಕೊಹ್ಲಿ ಈ ವರ್ಷ 14 ಏಕದಿನ ಪಂದ್ಯಗಳಿಂದ 1,202 ರನ್ ಸಂಪಾದಿಸಿದ್ದಾರೆ.
ಇನ್ನು ವಿಂಡೀಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ 871 ಅಂಕಗಳೊಂದಿಗೆ ಱಂಕಿಂಗ್​ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ತಂಡದ ಮತ್ತೊರ್ವ ಆರಂಭಿಕ ಬ್ಯಾಟ್ಸ್ ಮನ್ ಶಿಖರ್​ ಧವನ್ ಆಡಿದ ಐದು ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್ ಮಾಡಿ ನಾಲ್ಕು ಸ್ಥಾನ ಕೆಳಗಿಳಿದು 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್​ಪ್ರೀತ್ ಬುಮ್ರಾ ವಿಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯಕ್ಕೆ ತಂಡಕ್ಕೆ ವಾಪಸ್ ಆಗಮಿಸಿ ಸರಣಿಯಲ್ಲಿ ಐದು ವಿಕೆಟ್​ ಪಡೆದು ಮಿಂಚಿ ಐಸಿಸಿ ಏಕದಿನ ಱಂಕಿಂಗ್​ನಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನು ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಟಾಪ್ 10ರ ಱಂಕಿಂಗ್​ನಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದಿರುವ ಚಹಲ್ ಇಂಗ್ಲೆಂಡ್ ಆಲ್ ರೌಂಡರ್ ಆದೀಲ್ ರಶೀದ್ ಜೊತೆ 8 ಸ್ಥಾನ ಪಡೆದಿದ್ದಾರೆ. ಕೊನೆಯ ಪಂದ್ಯದಲ್ಲಿ 4 ವಿಕೆಟ್ ಪಡೆದ ರವೀಂದ್ರ ಜಡೇಜಾ 25ನೇ ಸ್ಥಾನದಿಂದ 16ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ