ಬೆಂಗಳೂರು, ಅ.24- ಕನ್ನಡ ಚಿತ್ರರಂಗಕ್ಕೆ ಸೀಮಿಠಿತ ಮಾರುಕಟ್ಟೆಯಿದ್ದು, ಸಣ್ಣಸಣ್ಣ ವಿಷಯಗಳಿಗೆ ಬೇರೆ ಬೇರೆ ನಾಯಕನಟರ ಅಭಿಮಾನಿಗಳು ಪರಸ್ಪರ ಕಿತ್ತಾಟ ಮಾಡುತ್ತ ಕನ್ನಡ ಚಿತ್ರರಂಗವನ್ನೇ ವಿನಾಶದ ಅಂಚಿಗೆ ಕೊಂಡೊಯ್ಯುತ್ತಿರುವುದು ವಿಷಾದದ ಸಂಗತಿ ಎಂದು ಸರ್ವಜ್ಞ ಮಿತ್ರ ವೃಂದ ತಿಳಿಸಿದೆ.
ಇತ್ತೀಚೆಗೆ ತೆರೆ ಕಂಡಿರುವ ಬಹುಕೋಟಿ ವೆಚ್ಚದ ದಿ ವಿಲನ್ ಚಿತ್ರದಲ್ಲಿನ ಕೆಲವು ದೃಶ್ಯಗಳಿಗೆ ಸಂಬಂಧಪಟ್ಟಂತೆ ಡಾ.ಶಿವರಾಜ್ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು ಪರಸ್ಪರ ಜಗಳ, ಹೊಡೆದಾಟಗಳಿಗೆ ಮುಂದಾಗಿದ್ದಾರೆ.
ಅಭಿಮಾನಿಗಳು ಕನ್ನಡ ಚಿತ್ರರಂಗದ ಗೌರವ ಉಳಿಸಬೇಕು ಮತ್ತು ಕಲೆಗೆ, ಕನ್ನಡ ಚಿತ್ರಗಳಿಗೆ ಪೆÇ್ರೀ ನೀಡಬೇಕು ಎಂದು ಸ್ವತಃ ಡಾ.ಶಿವರಾಜ್ಕುಮಾರ್ ಮತ್ತು ಸುದೀಪ್ ಮನವಿ ಮಾಡಿಕೊಂಡಿದ್ದರೂ ಅಭಿಮಾನಿಗಳು ಪರಸ್ಪರ ಕತ್ತಿ ಮಸೆಯುತ್ತಲೇ ಇದ್ದಾರೆ.
ದಿ ವಿಲನ್ ಅಣ್ಣ-ತಮ್ಮಂದಿರ ಪ್ರೀತಿ-ವಿಶ್ವಾಸ ಕಾಣುವಂತೆ ಪ್ರೇಮ್ ಅವರು ಬಹಳ ಎಚ್ಚರಿಕೆಯಿಂದ ಕಷ್ಟಪಟ್ಟು ಕನ್ನಡಕ್ಕೆ ಒಂದು ಉತ್ತಮ ಚಿತ್ರ ತರಲು ಪ್ರಯತ್ನಪಟ್ಟಿದ್ದಾರೆ.
ದಿ ವಿಲನ್ ಚಿತ್ರವನ್ನು ಡಾ.ಶಿವರಾಜ್ಕುಮಾರ್ ಮತ್ತು ಸುದೀಪ್ರ ಬಳಿ ಚಿತ್ರದ ಕಥೆಯನ್ನು ವಿವರಿಸಿಯೇ ತೆಗೆದಿದ್ದು.ಚಿತ್ರದ ಒಂದು ಸನ್ನಿವೇಶದಲ್ಲಿ ವಿಷಯ ತಿಳಿಯದೆ ತಮ್ಮನಾದವನು ಅಣ್ಣನಿಗೆ ಎರುಡ ಏಟುಗಳನ್ನು ಹೊಡೆದಾಗ ಪ್ರೀತಿಯ ತಮ್ಮನಿಗೆ ತಿರುಗಿ ಹೊಡೆಯಲು ಆ ಪ್ರೀತಿ ಅಡ್ಡ ಬರುತ್ತದೆ. ಎಷ್ಟೇ ಆದರೂ ತಮ್ಮ ಚಿಕ್ಕವನಲ್ಲವೆ?ಚಿತ್ರದ ಸಾರಾಂಶವನ್ನು ಅಭಿಮಾನಿಗಳಾದ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಮಿತ್ರವೃಂದದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಮೀ ಟೂ ಹೆಸರಲ್ಲಿ ನಾಯಕರ ಮಾನ ಹರಾಜು: ಮೀ ಟೂ ಅಭಿಯಾನದ ಹೆಸರಿನಲ್ಲಿ ಕೆಲವು ಕನ್ನಡ ಸಿನಿಮಾ ಹೀರೋಗಳ ಮಾನ ಹರಾಜಾಗುತ್ತಿದೆ. ಈ ಸಂಬಂಧ ಮಾಡಿರುವ ಆಪಾದನೆಗಳು ನಿಜವೋ ಸುಳ್ಳೋ ಯಾರಿಗೂ ಗೊತ್ತಾಗುತ್ತಿಲ್ಲ. ಇಂತಹ ಪ್ರಕರಣಗಳನ್ನು, ಹಗರಣಗಳನ್ನು ಫಿಲಂ ಛೇಂಬರ್ ಆಗಲಿ, ಅಂಬರೀಶ್ ಅವರಂತಹ ಹಿರಿಯ ನಟರು ಆಸಕ್ತಿ ವಹಿಸಿ ಮೊಳಕೆಯಲ್ಲೇ ಚಿವುಟಿ ಹಾಕದಿದ್ದರೆ ಬಹಳ ಬೇಗ ಕನ್ನಡ ಚಿತ್ರರಂಗ ಅವಸಾನದತ್ತ ಸಾಗುತ್ತದೆಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.