ಬೆಂಗಳೂರು, ಅ.21- ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಹುದ್ದೆಗೇರಿದ್ದು, ಯಾವುದೇ ಅದೃಷ್ಟದಿಂದಲ್ಲ ಅವರ ಪರಿಶ್ರಮದಿಂದ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಷ್ಟ್ರಧರ್ಮ ಆಯೋಜಿಸಿದ್ದ ಮೋದಿ ಮತ್ತೊಮ್ಮೆ ವಿಡಿಯೋ ಹಾಡಿನ ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಂದು ಗುಣಗಾನ ಮಾಡಿದರು.
ಕೇವಲ ಡಿಎನ್ಎ ಮಾತ್ರವೇ ಹಲವರನ್ನು ಪ್ರಧಾನಿ ಹುದ್ದೇಗೇರಿಸಿದೆ. ಕೆಲವರು ಹಣಬಲ, ಜಾತಿ ಬಲ ಹಾಗೂ ತಮ್ಮ ಕುಟುಂಬದ ರಾಜಕೀಯ ಹಿನ್ನಲೆಯ ಪರಿಣಾಮವಾಗಿ ದೇಶದ ಪ್ರಧಾನಿ ಹುದ್ದೆಗೇರುತ್ತಾರೆ. ಆದರೆ, ಜಾತಿ, ಹಣ, ಕುಟುಂಬದ ರಾಜಕೀಯ ಹಿನ್ನಲೆ ಇಲ್ಲದೆ ತಮ್ಮ ಶ್ರಮದಿಂದ ಪ್ರಧಾನಿ ಹುದ್ದೆಗೇರಿದವರು ನರೇಂದ್ರ ಮೋದಿ.
ದೇಶದ ಬಗ್ಗ ಅಪಾರ ಕನಸುಗಳನ್ನು ಹೊಂದಿರುವ ನರೇಂದ್ರ ಮೋದಿ ಯವರ ಸಾಧನೆಗಳನ್ನು ಪ್ರಸ್ತುತ ಪಡಿಸುವ ಇಂತಹ ವಿಡಿಯೋವನ್ನು ರಾಷ್ಟ್ರ ಧರ್ಮ ಸಂಸ್ಥೆಯ ಸಂತೋಷ್ ಕೆಂಚಾಂಬರವರು ಹೊರತಂದಿರುವುದು ಬಹಳ ಸಂತಸದ ವಿಷಯ ಎಂದರು. ಇಂತಹ ಕನಸುಗಳನ್ನು ಹೊಂದಿರುವ ಪ್ರಧಾನಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ರಾಷ್ಟ್ರ ಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬ ಮಾತನಾಡಿ, ಸರ್ಜಿಕಲ್ ಸ್ಟ್ರೈಕ್, ಫಸಲ್ ಬಿಮಾ ಯೋಜನೆ, ಮೇಕ್ ಇನ್ ಇಂಡಿಯಾ, ಜನಧನ ಯೋಜನೆ, ಯೂರಿಯಾ ಲೇಪಿತ ರಸಗೊಬ್ಬರ ವಿತರಣೆ ಹೀಗೆ ಹತ್ತು ಹಲವು ಕ್ರಾಂತಿಕಾರಿ ಯೋಜನೆಗಳ ಹರಿಕಾರ ಮೋದಿ ಅವರು. ಅವರ ನೇತೃತ್ವದ ಕೇಂದ್ರ ಸರಕಾರ ಕಳೆದ 4 ವರ್ಷಗಳಿಂದ ದೇಶದ ಜನಸಾಮಾನ್ಯರ ಅಭಿವೃದ್ದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ, ದೇಶದ ಅಭಿವೃದ್ದಿಗೆ ಮೋದಿಯವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಮೊದಲಿನಿಂದಲೂ ನಾನು ಮೋದಿಯವರನ್ನು ಇಷ್ಟಪಡುತ್ತೇನೆ. ಮೊದಿಯವರ ಘನತೆಯನ್ನು ಕಾಪಾಡುವ ಕರ್ತವ್ಯ ಬಿಜೆಪಿ ಕಾರ್ಯಕರ್ತರಿಗೆ ಇದೆ. ಅವರ ಕಾರ್ಯಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಅಗತ್ಯ ವಿದೆ ಎಂದರು.
ಮೋದಿ ಮತ್ತೊಮ್ಮೆ ಹಾಡನ್ನು ಚೇತನ್ ಮಂಜುನಾಥ್ ನಿರ್ದೇಶಿಸಿದ್ದು, ವಾಗೀಶ್ ಚನ್ನಗಿರಿ ಅವರ ಸಾಹಿತ್ಯವಿದೆ. ದೇಸಿ ಮೋಹನ್ ಮತ್ತು ಪಂಚಮ್ ಜೀವ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಶೋಕ್ ನಾಡಿಗ್ ನೇತೃತ್ವದಲ್ಲಿ ಛಾಯಾಗ್ರಹಣ ಹಾಗೂ ಸಂಕಲನ ನಡೆದಿz
ಎಬಿವಿಪಿಯ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದ್ರಿ, ಸಮಾಜ ಸುಧಾರಕರಾದ ಶಕುಂತಲಾ ಅಯ್ಯರ್ ಮತ್ತಿತರರು ಭಾಗವಹಿಸಿದ್ದರು.