ಮುಂಬೈ: ಅಧಿಕಾರಿಗಳ ಮಾತನ್ನೂ ಲೆಕ್ಕಿಸದೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಅವರು ಅಪಾಯಕಾರಿ ರೀತಿಯಲ್ಲಿ ಸೆಲ್ಫಿ ತೆಗೆದುಕೊಂಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ಸಿಎಂ ಪತ್ನಿಯ ಈ ನಡೆ ಈಗ ಭಾರೀ ಟೀಕೆಗೆ ಗುರಿಯಾಗಿದೆ. ಮುಂಬೈ-ಗೋವಾ ಕ್ರೂಝ್ ಸೇವೆ(ಬೋಟ್ ಸೇವೆ)ಯನ್ನು ಉದ್ಘಾಟಿಸಿದ ಅಮೃತ ಫಡ್ನಾವಿಸ್ ಅವರು ನಂತರ ರಕ್ಷಣಾ ಅಧಿಕಾರಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಸುರಕ್ಷಾ ನಿಯಮವನ್ನು ಉಲ್ಲಂಘಿಸಿ ಅಪಾಯದ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಬೋಟ್ ತೇಲಾಡುತ್ತಿರುವ ವೇಳೆ ಆಯಾತಪ್ಪಿ ಬೀಳುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಎಚ್ಚರಿಕೆಯನ್ನು ಸುರಕ್ಷತಾ ಅಧಿಕಾರಿಗಳು ನೀಡಿದ್ದರೂ ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೇ ಸೆಲ್ಫಿ ತೆಗೆದುಕೊಳ್ಳುವಲ್ಲಿ ಅಮೃತ ಮಗ್ನರಾಗಿದ್ದು, ದೇಶಾದ್ಯಂತ ಹೊಸ ವಿವಾದ ಸೃಷ್ಟಿಸಿದೆ.