ಶಬರಿಮಲೆಯಲ್ಲಿ ಇಬ್ಬರು ಮಹಿಳಾ ಭಕ್ತರ ಬಂಧನ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಬಂದಿದ್ದ ಆಂದ್ರಪ್ರದೇಶ ಮೂಲದ ಇಬ್ಬರು ಮಹಿಳಾ ಭಕ್ತಾದಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಆಂಧ್ರ ಪ್ರದೇಶದ ಗುಂಟೂರಿನಿಂದ ಪುರುಷ ಭಕ್ತಾಧಿಗಳ ಗುಂಪಿನಲ್ಲಿ ಆಗಮಿಸಿದ್ದ ಇಬ್ಬರು ಮಹಿಳಾ ಭಕ್ತಾಧಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಯಾರ್ತಾರ್ಥಿಗಳ ಗುಂಪಿನಲ್ಲಿ ಈ ಮಹಿಳಾ ಭಕ್ತರು ಬಂದಿದ್ದು, ಶಬರಿಮಲೆಯಲ್ಲಿ ವಿಶೇಷ ಆಚರಣೆ ಬಗ್ಗೆ ಏನೂ ಗೊತ್ತಿಲ್ಲ. ಇವರನ್ನು ನೋಡಿದ ಕೆಲವರು ಹಿಂದಕ್ಕೆ ಹೋಗುವಂತೆ ಹೇಳಿದ್ದಾರೆ. ಆದರೆ, ಹಿಂದೆ ಹೋಗಲು ಒಪ್ಪದ ಅವರು ನಿಲಕ್ಕಲ್ ಗೆ ವಾಪಾಸ್ ಹೋಗಲು ಬಯಸಿದ್ದರು ಎಂದು ಐಜಿ ಎಸ್ . ಶ್ರೀಜಿತ್ ತಿಳಿಸಿದ್ದಾರೆ.

ಈ ನಡುವೆ ಅಯ್ಯಪ್ಪ ದೇವಸ್ಥಾನ ಮುಚ್ಚುವ ಬೆದರಿಕೆ ಹಿನ್ನಲೆಯಲ್ಲಿ ಟ್ರಾವಂಕೂರು ದೇವಸ್ವಂ ಮಂಡಳಿ ಮತ್ತು ಎಲ್ ಡಿಎಫ್ ಸರ್ಕಾರ ಇಡೀ ಪರಿಸ್ಥಿತಿಯ ಪರಾಮರ್ಶೆ ನಡೆಸುವುದಾಗಿ ಹೇಳಿಕೆ ನೀಡಿವೆ.

ಶಬರಿಮಲೆ ಸನ್ನಿಧಾನದಲ್ಲಿ ಅಶಿಸ್ತು ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ