ಅತ್ಯಾಚಾರ ಆರೋಪ: ಕೇರಳ ಮಾಜಿ ಸಿಎಂ ವಿರುದ್ಧ ಎಫ್ ಐ ಆರ್ ದಾಖಲು

ತಿರುವನಂತಪುರ: ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಅತ್ಯಾಚಾರ ಆರೋಪ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಸೋಲಾರ್ ಹಗರಣದ ಪ್ರಮುಖ ಆರೋಪಿಗಳಾದ ಸರಿತಾ ನಾಯರ್ ಅವರ ಮೇಲೆ ಉಮ್ಮನ್ ಚಾಂಡಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಸಿಎಂ ಅಧಿಕೃತ ನಿವಾಸ “ಕ್ಲಿಫ್ ಹೌಸ್” ನಲ್ಲಿ 2013ರಲ್ಲಿ ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಿದ ಪೋಲೀಸರು ಶನಿವಾರ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಎಫ್ಐಆರ್ ಪ್ರತಿ ಸಲ್ಲಿಸಿದ್ದಾರೆ.

ಸೋಲಾರ್ ಫಲಕ ಅಳವಡಿಕೆ ಸಂಬಂಧ ಖಾಸಗಿ ಸಂಸ್ಥೆಯೊಡನೆ ಹೂಡಿಕೆಗಾಗಿ ಮಾತುಕತೆಗೆ ತೆರಳಿದ್ದಾಗ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಪ್ರತಿಯಾಗಿ ಚಾಂಡಿಯವರು ತನ್ನನ್ನು ಅವರ ಕೋಣೆಗೆ ಆಹ್ವಾನಿಸಿದ್ದರು ಎಂದು ಸರಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೋಲಾರ್ ಹಗರಣ ಪರವಾಗಿ ಸರಿತಾ ನಾಯರ್ ಅಂದಿನ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಸಚಿವರುಗಳಿಗೆ 1.90 ಕೋಟಿ rU. ಲಂಚ ನೀಡಿದ್ದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ