ಕೂಡಿಟ್ಟ ಗ್ರಾಹಕರ ಹಣಕ್ಕೆ ಪಂಗನಾಮ, ಸಿಬ್ಬಂದಿಗಳಿಗೆ ಥಳಿತ

ಬೆಳಗಾವಿ: ಗ್ರಾಹಕರ ಕೂಡಿಟ್ಟ ಹಣ ಕೇಳಿ ಕೇಳಿ ಜನ ಬೇಸತ್ತು ಅವರೆಲ್ಲರೂ ಸೆರಿ ಬ್ಯಾಂಕ್ ಗೆ ತೆರಳಿ ಸಿಬ್ಬಂದಿಗಳನ್ನ ಕೂಡಿ ಹಾಕಿ ಸಿಬ್ಬಂದಿಗಳನ್ನ ಕೆಲವರು ತರಾಟೆಗೆ ತೆಗೆದುಕ್ಕೊಳ್ಳುತ್ತಿದ್ದರೆ ಇನ್ನು ಕೆಲ ಗ್ರಾಹಕರು ಸಿಬ್ಬಂದಿಗಳನ್ನ ಚೆನ್ನಾಗಿ ಥಳಿಸಿದ್ದ ಘಟನೆ ನಗರದ ಶಿವಾಜಿನಗರದಲ್ಲಿ‌ನಡೆದಿದೆ.

ತಾವು ಕೂಡಿಟ್ಟ ಹಣಕ್ಕೆ ಗಲಾಟೆ ಮಾಡುತ್ತಿರುವ ಬಡ ಜನರು, ಕಷ್ಟ ಕಾಲಕ್ಕೆ ಆಗುತ್ತೆ ಅಂತೆ ತಾವು ದುಡಿದ ಹಣದಲ್ಲಿ ಅಲ್ಪ ಸ್ವಲ್ಪ ಹಣವನ್ನು ಕೋ ಆಪ್ ರೆಟಿವ ಸೋಸೈಟಿಯಲ್ಲಿ ಕೂಡಿಟ್ಟಿದ್ದರು, ಆದರೆ ಬೆಳಗಾವಿಯ ಶಿವಾಜಿ ನಗರದಲ್ಲಿರುವ ಸಿದ್ದಾರ್ಥ ಕೋ ಆಪರೆಟಿವ್ ಸೋಸೈಟಿ ಮ್ಯಾನೆಜರ್ ಜನರು ಠೆವಣಿ ಇಟ್ಟ ಹಣದಲ್ಲಿ ಒಂದು ಕೋಟಿ ಹಣವನ್ನು ಪಂಗನಾಮ ಹಾಕಿ ಪರಾರಿಯಾಗಿದ್ದಾನೆ, ಆದರೆ ಗ್ರಾಹಕರು ನಮ್ಮ ಹಣ ನಮಗೆ ಬೇಕೆ ಬೇಕು ಎಂದು ಸುಮಾರು ೨ ಘಂಟೆಗಳ ಕಾಲ ಸೋಸೈಟಿಎ ಬಿಗ ಹಾಕಿ ಸಿಬ್ಬಂದಿಗಳನ್ನ ಕೂಡಿ ಹಾಕಿದ್ದರು, ಜೊತೆಗೆ ಸುಮಾರು ೫೦೦ ಕ್ಕೂ ಹೆಚ್ಚು ಗ್ರಾಹಕರು ಸೋಸೈಟಿಯನ್ನ ನಂಬಿ ಇಟ್ಟಿದ್ದ ಹಣ ಮಾತ್ರ ಗುಳಂ ಅಗಿದೆ..ಗ್ರಾಹಕರು ಆಕ್ರೋಶ ಗೊಂಡು ಸಿಬ್ಬಂದಿಗಳನ್ನು ಥಳಿಸಿದ್ದಾರೆ.

ಸೊಸೈಟಿ ಮ್ಯಾನೇಜರ್ ಉತ್ತಮ್ಮ ಮಕ್ಕನ್ನವರ ೯೦ ಲಕ್ಷ ಪಂಗನಾಮ ಹಾಕಿದ್ದು ನಿಜಾ ಅವನು ನಾನು ಗ್ರಾಹಕರ ಹಣವನ್ನ ಬಳಕೆ ಮಾಡಿಕ್ಕೊಂಡಿದ್ದು ನಿಜಾ ಆದಷ್ಟು ಬೇಗ ಹಣವನ್ನು ಕೊಡುತ್ತಾನೆ ಎಂದು ಸಿದ್ದಾರ್ಥ ಕೋ ಆಪ್ ರೆಟಿವ್ ಸೋಸೈಟಿಯ ಸಂಸ್ಥಾಪಕ ತಮ್ಮ ಮ್ಯಾನೆಜರ ಮಾಡಿದ್ದು ತಪ್ಪು ಎಂದು ಒಪ್ಪಿಕ್ಕೊಂಡಿದ್ದಾರೆ. ಜೊತೆಗೆ ಇವೆಲ್ಲ ಹೈಡ್ರಾಮಾಗಳ ಆದ ಬಳಿಕ ಸ್ಥಳಕ್ಕೆ ಮಾರ್ಕೆಟ್ ಪೋಲಿಸ್ ಠಾಣೆಯ ಪೋಲಿಸರು ಬೆಟಿ ನಿಡಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ..ಜೊತೆಗೆ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಉತ್ತಮ್ಮ ಮಕ್ಕನ್ನವರ ಮೆಲೆ ವಂಚಣೆ ಪ್ರಕರಣವೂ ಕೂಡಾ ದಾಖಲಾಗಿದೆ.ಒಟ್ಟಿನಲ್ಲಿ ಕಷ್ಟಕಾಲಕ್ಕೆ ಅನೂಲವಾಗುತ್ತೆ ಅಂತೆ ಸೋಸೈಟಿಗಳನ್ನ ನಂಬಿ ಕೂಡಿಟ್ಟ ಹಣ ಮಾತ್ರ ದುರ್ಬಳಕೆ ಆಗುತ್ತಿದೆ..ಜನರು ಮಾತ್ರ ಇತ್ತ ಕೂಡಿಟ್ಟ ಹಣವೂ ಇಲ್ಲ, ಎಂದು ಕಂಗಾಲಾಗಿದ್ದಂತೂ ಸತ್ಯ…ಮಾರ್ಕೆಟ್ ಪೋಲಿಸರು ಮ್ಯಾನೆಜರ ಉತ್ತಮ್ಮ ಮಕ್ಕನ್ನವರನಿಗೆ ಬಲೆ ಬೀಸಿದ್ದಾರೆ…

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ