ಹೋಟೆಲ್ ಐಶ್ವರ್ಯ ಬಂದ್

ಹಾಸನ: ನಗರದ ಕೆ.ಆರ್.ಪುರಂ ಬಡಾವಣೆಯ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬಹು ಹಂತಸ್ತಿನ ಐಶ್ವರ್ಯ ಹೊಟೇಲ್ ಅನ್ನು ನಗರಸಭೆ ಬಂದ್ ಮಾಡಿತು.
ಬೆಳಗ್ಗೆ 7 ಗಂಟೆಗೆ ಜೆಸಿಬಿ ಸಮೇತ ಆಗಮಿಸಿದ ನಗರಸಭೆಯ ಮುಖ್ಯ ಆಯುಕ್ತ ಪರಮೇಶ್, ಎಂಜಿನಿಯರ್ ಹಾಗೂ ಸಿಬ್ಬಂದಿ ಹೋಟೆಲ್ ಪ್ರವೇಶದ್ವಾರಕ್ಕೆ ಬೀಗ ಹಾಕಿ ಸಾರ್ವಜನಿಕರು ಪ್ರವೇಶಿಸದಂತೆ ಮುದ್ರೆ ಹೊತ್ತಿದರು.

ಅಲ್ಲದೆ, ಹೋಟೆಲ್ ಗೆ ನಗರಸಭೆ ವತಿಯಿಂದ ಕಲ್ಪಿಸಿದ ಒಳಚರಂಡಿ ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು.

ಈ ವೇಳೆ ಮಾತನಾಡಿದ ಆಯುಕ್ತ ಪರಮೇಶ್,ಹೋಟೆಲ್ ಮಾಲೀಕ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ 1700 ಚದರ ಅಡಿಗೆ ಅನುಮತಿ ಪಡೆದಿದ್ದರು.
ಅದನ್ನು ಉಲ್ಲಂಘಿಸಿ 7000 ಚದರ ಅಡಿಯಷ್ಟು ಸರ್ಕಾರಿ ಜಾಗವನ್ನು ಅತಿ ಕ್ರಮಿಸಿಕೊಂಡಿದ್ದರು. ಇದರಿಂದ ವಾಹನದಟ್ಟಣೆ ಹೆಚ್ಚಿ ಪಾದಾಚಾರಿಗಳಿಗೆ ಸಮಸ್ಯೆ ಆಗುತ್ತಿತ್ತು. ಅಲ್ಲದೆ ಸರ್ಕಾರಿ ಜಾಗದ ಒತ್ತುವರಿ ಆರೋಪವಿತ್ತು.ಈ ಹಿಂದೆಯೂ ನಗರಸಭೆಯಿಂದ ಸೂಚನೆ ನೀಡಿ ಕಾರ್ಯಾಚರಣೆ ನಡೆಸಲಾಗಿತ್ತು.ಆದರೂ
ಸರ್ಕಾರಿ ಜಾಗ ಒತ್ತುವರಿ ಮಾಡಲಾಗಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಕಟ್ಟಡ ಬಂದ್ ಮಾಡಿ ಸೌಲಭ್ಯಗಳನ್ನು ಕಡಿತಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಒಟ್ಟಾರೆ ನಗರಸಭೆಯ ಇಂತಹ ಕಠಿಣ ಕ್ರಮಗಳಿಂದ ಅಕ್ರಮ ಭೂಗಳ್ಳರಲ್ಲಿ ಆತಂಕ ಮನೆ ಮಾಡಿರುವುದು ಸತ್ಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ