ಅ.22 ರಂದು ಕಾಫಿ ಬೆಳೆಗಾರರ ಅಖಿಲ ಭಾರತ ಸಮಾವೇಶ

ಬೆಂಗಳೂರು, ಅ.16-ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಅವುಗಳ ಪರಿಹಾರದ ದಾರಿಯನ್ನು ನಿರ್ಧರಿಸಲು ಇದೇ 22 ರಂದು ಕಾಫಿ ಬೆಳೆಗಾರರ ಅಖಿಲ ಭಾರತ ಸಮಾವೇಶವನ್ನು ನಗರದ ಎಸ್‍ಸಿಎಂ ಹೌಸ್‍ನಲ್ಲಿ ಆಯೋಜಿಸಲಾಗಿದೆ ಎಂದು ಕೆಪಿಆರ್‍ಎಸ್ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಕಿಸಾನ್ ಸಭಾದ ನೇತೃತ್ವದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಹಯೋಗದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶದ ಕಾಫಿ ಉತ್ಪಾದನೆಯಲ್ಲಿ ಶೇ.90ಕ್ಕಿಂತ ಹೆಚ್ಚು ಕೊಡುಗೆ ಸಣ್ಣ ಬೆಳೆಗಾರರದ್ದಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಕಾಫಿ ಬೆಳೆಯುವ ಕರ್ನಾಟಕ ರಾಜ್ಯ ಇವುಗಳ ಜೊತೆಗೆ ಅತಿವೃಷ್ಟಿ, ಅನಾವೃಷ್ಟಿ, ಆನೆ ಹಾವಳಿ ಮತ್ತು ಸಾಗುವಳಿ ಭೂಮಿಗೆ ಹಕ್ಕುಪತ್ರವಿಲ್ಲದ ಅತಂತ್ರ ಸ್ಥಿತಿಯಿಂದ ನಲುಗಿ ಹೋಗಿದೆ.
ಸ್ವಾಮಿನಾಥನ್ ಕೃಷಿ ಆಯೋಗದ ಶಿಫಾರಸ್ಸಿನಂತೆ ಕಾಫಿ ಬೆಳೆಯ ಒಟ್ಟು ಉತ್ಪಾದನಾ ವೆಚ್ಚಕ್ಕೆ ಶೇ.50 ರಷ್ಟು ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ಖಾತ್ರಿಯಾಗಿ ದೊರೆಯುವಂತೆ ಬೆಂಬಲ ಬೆಲೆ ಕಾನೂನು ಮಾಡಬೇಕು, ಅಗ್ಗದ ದರದ ಆಮದು ದಾಸ್ತಾನಿನ ಮೇಲೆ ಅಗತ್ಯ ಆಮದು ಸುಂಕ ಹಾಕಿ ಕಾಫಿ ಬೆಳೆಗಾರರ ಸಂರಕ್ಷಣೆಗೆ ಮುಂದಾಗಬೇಕು. ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಆನೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರವನ್ನು ಸರ್ಕಾರ ರೂಪಿಸಬೇಕು.

ತಕ್ಷಣವೇ ಪ್ರಕೃತಿ ವಿಕೋಪಕ್ಕೆ ಅಗತ್ಯ ಪರಿಹಾರವನ್ನು ಘೋಷಿಸಬೇಕು. ಬೆಳೆ ವಿಮೆಯನ್ನು ವೈಜ್ಞಾನಿಕವಾಗಿ ಜಾರಿ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.
ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನನ್ ಮುಲ್ಲಾ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಾಫಿ ಮೌಲ್ಯವರ್ಧನೆ-ಸಂಸ್ಕರಣೆ-ಮಾರುಕಟ್ಟೆ ಎಂಬ ವಿಷಯ ಕುರಿತು ವಿಶೇಷ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ