ಬನದ ಬದುಕು ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನಕ್ಕೆ ಮಾಜಿ ಪ್ರಧಾನಿ ಚಾಲನೆ

ಬೆಂಗಳೂರು, ಅ.16-ವನ್ಯಜೀವಿಗಳ ಛಾಯಾಚಿತ್ರ ಸಂಗ್ರಹ ಮಕ್ಕಳಿಗೆ ಸೂಕ್ತ ಮಾಹಿತಿಯನ್ನು ಒದಗಿಸಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು.
ಚಿತ್ರಕಲಾ ಪರಿಷತ್‍ನಲ್ಲಿ ಇಂದಿನಿಂದ ಅ.21ರವರೆಗೆ ನಡೆಯುವ ಛಾಯಾಗ್ರಾಹಕ ಲೋಕೇಶ್ ಮೊಸಳೆ ಅವರ ಬನದ ಬದುಕು ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಲೋಕೇಶ್ ಮೊಸಳೆ ಅವರು ಪ್ರಾಣಿ ಪಕ್ಷಿಗಳನ್ನೊಳಗೊಂಡ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ನಾವು ಮಕ್ಕಳಿಗಾಗಿ ಖರೀದಿಸುವ ಉದ್ದೇಶವಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಛಾಯಾಚಿತ್ರ ಸಂಗ್ರಹ ಕಾರ್ಯ ಮುಗಿದಿಲ್ಲ. ಇನ್ನು ಹೆಚ್ಚಿನ ರೀತಿಯಲ್ಲಿ ವನ್ಯಜೀವಿಗಳ ಛಾಯಾಚಿತ್ರಗಳನ್ನು ಲೋಕೇಶ್ ಪ್ರದರ್ಶಿಸಬೇಕು ಎಂದರು.

ಅವರ ಹಾದಿ ಕಷ್ಟದ ಹಾದಿಯಾಗಿದ್ದು, ಅವರ ಛಾಯಾಚಿತ್ರ ಪ್ರದರ್ಶನವು ಮುಂದೆ ಸಾಗಬೇಕು ಎಂದು ಆಶಿಸಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ನಿಸರ್ಗ ಮತ್ತು ಮನುಷ್ಯರ ಸಂಬಂಧ ಅರ್ಥ ಮಾಡಿಕೊಳ್ಳಲು ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಅನುಕೂಲವಾಗಿದೆ. ಇಂತಹ ಛಾಯಾಚಿತ್ರ ಗ್ರಾಹಕರನ್ನು ಪೆÇ್ರೀ ಇನ್ನೂ ಎತ್ತರದ ಮಟ್ಟಕ್ಕೆ ಲೋಕೇಶ್ ಮೊಸಳೆ ಬೆಳೆಯಬೇಕು ಎಂದು ಹಾರೈಸಿದರು.
ಧ್ಯಾನ, ಯೋಗದ ರೀತಿಯಲ್ಲಿ ಬಹಳಷ್ಟು ತಾಳ್ಮೆಯಿಂದ ಕಾಯ್ದು ವನ್ಯಜೀವಿಗಳನ್ನು ಚಿತ್ರೀಕರಿಸಬೇಕಾಗುತ್ತದೆ. ವನ್ಯಜೀವಿಗಳ ಛಾಯಾಚಿತ್ರ ತೆಗೆಯುವ ಸಾಹಸ ಸಾರ್ಥಕವಾಗಿದೆ ಎಂದರು.

ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪೆÇ್ರ.ರಂಗಪ್ಪ ಮಾತನಾಡಿ, ವಿಜ್ಞಾನಿ ತನ್ನ ಸಂಶೋಧನೆ ಪೂರ್ಣಗೊಳ್ಳುವವರೆಗೂ ತಾಳ್ಮೆಯಿಂದ ಕಾಯುವಂತೆ ವನ್ಯಜೀವಿ ಛಾಯಾಚಿತ್ರ ತೆಗೆಯಲು ಸಾಕಷ್ಟು ತಾಳ್ಮೆ ವಹಿಸಬೇಕಾಗುತ್ತದೆ. ಆಗ ಮಾತ್ರ ಯಶಸ್ವಿ ಛಾಯಾಚಿತ್ರ ತೆಗೆಯಲು ಸಾಧ್ಯವಾಗುತ್ತದೆ. ನಿಸರ್ಗದ ಸಂಪತ್ತನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಛಾಯಾಗ್ರಾಹಕ ಲೋಕೇಶ್ ಮೊಸಳೆ ಮಾತನಾಡಿ, ವನ್ಯಜೀವಿಗಳ ಛಾಯಾಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್ ಮತ್ತು ಶುಭಾಶಯಪತ್ರಗಳನ್ನು ಹೊರತಂದಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಅರಣ್ಯದಲ್ಲಿ ವಾಸಿಸುವ ಆನೆ, ಕಾಡುಕೋಳಿ, ಚಿರತೆ ಸೇರಿದಂತೆ ವಿವಿಧ ಪ್ರಾಣಿ ಪಕ್ಷಗಳಿರುವ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕವಿಯತ್ರಿ ಸುಜಾತ, ಗ್ರಾವಿಟಿ ಒನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಕೆರೆಗಳ ಒತ್ತುವರಿ ಹಾಗೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಶೀಘ್ರ ಆರಂಭ
ಬೆಂಗಳೂರು, ಅ.16- ನಗರದ ಕೆರೆಗಳ ಒತ್ತುವರಿ ಹಾಗೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ನಗರ ಜಿಲ್ಲಾಧಿಕಾರಿ ವಿಜಯ್‍ಶಂಕರ್ ತಿಳಿಸಿದರು.

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆಗಳ ಬಳಿ ಮಾರ್ಕಿಂಗ್ ಮಾಡಿರುವ ಜಾಗವನ್ನು ಸ್ಥಳೀಯರು ಅಳಿಸಿ ಹಾಕುತ್ತಿದ್ದಾರೆ. ಒತ್ತುವರಿ ತೆರವು ಮುಗಿಯುವವರೆಗೂ ಸರ್ವೆ ಅಧಿಕಾರಿಗಳು ಜತೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ನಗರದ ಸುಮಾರು 10 ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆ. ನಗರದ ಕೆರೆಗಳಿಗೆ ಕೈಗಾರಿಕೆಗಳು ಮತ್ತಿತರೆಡೆಯಿಂದ ಕೊಳಚೆ ನೀರು ಸೇರುತ್ತಿದೆ. ಈಗಾಗಲೇ ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಜತೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಸಣ್ಣ ನೀರಾವರಿ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಎರಡು ಸಭೆ ನಡೆಸಲಾಗಿದೆ ಎಂದರು.

ಮೊದಲ ಹಂತದಲ್ಲಿ 10 ಕಲುಷಿತ ಕೆರೆಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಕೆರೆ ನಿರ್ವಹಣೆ ಹೊತ್ತಿರುವ ಬಿಡಿಎ, ಬಿಬಿಎಂಪಿ ಮತ್ತಿತರ ಇಲಾಖೆಗಳಲ್ಲಿನ ನಿಧಿ ಬಳಸಿ ಒಂದು ಸಾಮಾನ್ಯ ಸಮಿತಿ ರಚಿಸಿ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಇದಕ್ಕಾಗಿ ಕಾರ್ಯನಿರ್ವಹಣಾ ಯೋಜನೆ ತಯಾರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಮತ್ತೆ ಮುಂದುವರಿಸಲಾಗುವುದು. ರಾಜಕಾಲುವೆ ಬಳಿ ಮಾರ್ಕಿಂಗ್ ಆಗಿರುವ ಜಾಗವನ್ನು ಸ್ಥಳೀಯರು ಅಳಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಲಾಗುವುದು ಎಂದು ವಿಜಯ್‍ಶಂಕರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ