ಕೃಷಿ ಬೆಳೆಯಲ್ಲಿ ಕೀಟ ಬಾಧೆ ಕುರಿತು ಮಾಹಿತಿ: ಪ್ಲಾಂಟಿಕ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ

ಬೆಂಗಳೂರು, ಅ.15- ಕೃಷಿ ಬೆಳೆಯಲ್ಲಿ ಕೀಟ ಬಾಧೆ ಕುರಿತು ಸಮಗ್ರ ಮಾಹಿತಿ ನೀಡುವ ಅತ್ಯಾಧುನಿಕವಾದ ಪ್ಲಾಂಟಿಕ್ ಮೊಬೈಲ್ ಅಪ್ಲಿಕೇಷನನ್ನು ಎನ್.ಎಚ್.ಶಿವಶಂಕರರೆಡ್ಡಿ ಬಿಡುಗಡೆ ಮಾಡಿದರು.

ವಿಕಾಸೌಧದ ತಮ್ಮ ಕಚೇರಿಯಲ್ಲಿ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜರ್ಮನ್ ಕಂಪೆನಿ, ಇಂಟರ್‍ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್ಸಿಟ್ಯೂಟ್ ಫಾರ್ ದಿ ಸೆಮಿ ಅರೈಡ್ ಟ್ರಾಫಿಕ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಈ ಅಪ್ಲಿಕೇಷನ್‍ನಿಂದ ಹೆಚ್ಚಿನ ಅನುಕೂಲಗಳಾಗುತ್ತವೆ. ರೈತರು ರೋಗಬಾಧಿತ ಯಾವುದೇ ಬೆಳೆಯ ಫೆÇೀಟೋವನ್ನು ಅಪ್ಲಿಕೇಷನ್‍ಗೆ ಅಪ್ಲೌಡ್ ಮಾಡಿದರೆ. ಅದು ತನ್ನ ಕೃತಕ ಬುದ್ದಿವಂತಿಕೆಯಿಂದ ರೋಗವನ್ನು ಗುರುತಿಸಿ ನಿರ್ವಹಣಾ ಕ್ರಮವನ್ನು ತಿಳಿಸಲಿದೆ.

ಜತೆಗೆ ಚಿತ್ರಗಳು ಯಾವ ಪ್ರದೇಶದಿಂದ, ಯಾವಾಗ ಅಪ್ಲೌಡ್ ಮಾಡಲಾಗಿದೆ ಎಂಬ ಮಾಹಿತಿಯನ್ನು ರವಾನಿಸುವ ಮೂಲಕ ಕೃಷಿ ಇಲಾಖೆಯು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಲಿದೆ. ರೈತರು, ವಿಜ್ಞಾನಿಗಳು ಮತ್ತು ತಜ್ಞರಿಗೆ ಇದು ಸಮಾನವೇದಿಕೆಯಾಗಿದ್ದು, ಎಲ್ಲರೂ ಪರಸ್ಪರ ಮಾಹಿತಿ ಮತ್ತು ಸಲಹೆಗಳನ್ನು ಹಂಚಿಕೊಳ್ಳಬಹುದೆಂದು ಸಚಿವರು ತಿಳಿಸಿದರು.

ಪ್ರತಿಯೊಂದು ಬೆಳೆಯ ಮಾಹಿತಿಯನ್ನು ಈ ಅಪ್ಲಿಕೇಷನ್‍ನಲ್ಲಿ ಅಳವಡಿಸಲಾಗಿದ್ದು, ಕಾಲ ಕಾಲಕ್ಕೆ ಕೀಟಬಾಧೆ ನಿವಾರಣೆ, ಪೆÇೀಷಕಾಂಶ ಸೇರಿದಂತೆ ಹಲವಾರು ಮಾಹಿತಿಗಳು ರೈತರಿಗೆ ತಲುಪುತವೆ. ಸಸ್ಯಪೀಡೆಗಳ ಕೋಶ ಕೂಡ ಇದರಲ್ಲಿ ಅಳವಡಿಕೆಯಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ