2018ರಲ್ಲಿ ಆರ್ಥಿಕ ಬೆಳವಣಿಗೆ ಶೇಕಡ 7.3, ಸದ್ಯದಲ್ಲೆ ಚೀನಾ ಹಿಂದಿಕ್ಕಲಿದೆ ಭಾರತ: ಐಎಂಎಫ್ ವರದಿ

ವಾಷಿಂಗ್ಟನ್: ಭಾರತದ ಆರ್ಥಿಕ ಅಭಿವೃದ್ಧಿ ಈ ವರ್ಷ ಶೇಕಡಾ 7.3ರಷ್ಟು ಮತ್ತು ಮುಂದಿನ ವರ್ಷ ಶೇಕಡಾ 7.4ರ ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವರದಿ ತಿಳಿಸಿದೆ. ವಿಶ್ವದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರಗಳು ಎಂಬ ಬಿರುದನ್ನು ಭಾರತ ಈ ವರ್ಷ ಚೀನಾವನ್ನು ಹಿಂದಿಕ್ಕಿ ಪಡೆದುಕೊಳ್ಳುವ ಸಾಧ್ಯತೆಯಿದೆ.ಕಳೆದ ವರ್ಷ ಭಾರತದ ಆರ್ಥಿಕಾಭಿವೃದ್ಧಿ ಶೇಕಡಾ 6.7ರ ದರದಲ್ಲಿತ್ತು. ಭಾರತದ ಆರ್ಥಿಕತೆ ಬೆಳವಣಿಗೆಯಾಗಲು ಮುಖ್ಯ ಕಾರಣ ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬರುತ್ತಿರುವ ಸುಧಾರಣೆಗಳು. ಸರಕು ಮತ್ತು ಸೇವಾ ತೆರಿಗೆ ಜಾರಿ, ಹಣದುಬ್ಬರ ನಿಯಂತ್ರಿಸುವ ಗುರಿಯತ್ತ ಮಾಡುತ್ತಿರುವ ಕೆಲಸಗಳು, ದಿವಾಳಿತನ ಮತ್ತು ದಿವಾಳಿತನ ಸಂಹಿತೆ, ವಿದೇಶಿ ಹೂಡಿಕೆಯನ್ನು ಉದಾರೀಕರಣಗೊಳಿಸಲು ಮತ್ತು ವ್ಯವಹಾರವನ್ನು ಮಾಡಲು ಸುಲಭವಾಗಿಸುವ ಕ್ರಮಗಳುಗಳಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಇತ್ತೀಚೆಗಿನ ವಿಶ್ವ ಆರ್ಥಿಕ ಹೊರನೋಟ(ಡಬ್ಲ್ಯುಇಒ) ವರದಿಯಲ್ಲಿ ತಿಳಿಸಿದೆ.2018ರ ಆರ್ಥಿಕ ಸಾಲಿನಲ್ಲಿ ಭಾರತದ ಬೆಳವಣಿಗೆ ಶೇಕಡಾ 7.3ರಷ್ಟು ಮತ್ತು 2019ರಲ್ಲಿ ಅದು ಶೇಕಡಾ 7.4ರಷ್ಟು ತೋರಿಸುತ್ತಿದೆ. ಕರೆನ್ಸಿಗಳ ವಿನಿಮಯ ಉಪಕ್ರಮ ಮತ್ತು ಜಿಎಸ್ ಟಿಗಳ ಜಾರಿಯಿಂದ ಆರ್ಥಿಕತೆಗೆ ಸ್ವಲ್ಪ ಮಟ್ಟಿನ ಪೆಟ್ಟು ಬಿದ್ದರೂ ಕೂಡ ಹೂಡಿಕೆಯಲ್ಲಿ ಹೆಚ್ಚಳ ಮತ್ತು ಖಾಸಗಿ ಬಳಕೆಯ ಹೆಚ್ಚಳದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆ ವೇಗವಾಗಿದೆ ಎಂದು ವಿಶ್ವದ ಹಣಕಾಸು ಸಂಸ್ಥೆ ತಿಳಿಸಿದೆ.ವಿಶ್ವದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಚೀನಾ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದು ಭಾರತಕ್ಕಿಂತ ಶೇಕಡಾ 0.2ರಷ್ಟು ಮುಂದಿತ್ತು. ಏಪ್ರಿಲ್ ನಲ್ಲಿ ವಿಶ್ವ ಆರ್ಥಿಕ ಹೊರನೋಟ ವರದಿಗಿಂತ ವಿಶ್ವ ಹಣಕಾಸು ನಿಧಿ ಭಾರತ ಮತ್ತು ಚೀನಾಗೆ ಕ್ರಮವಾಗಿ ಶೇಕಡಾ 0.4 ಮತ್ತು ಶೇಕಡಾ 0.32ರಷ್ಟು ಕಡಿಮೆ ಆರ್ಥಿಕ ಬೆಳವಣಿಗೆಯನ್ನು ತೋರಿಸಿದೆ.ಅಮೆರಿಕಾದ ಆರ್ಥಿಕತೆ 2018ರಲ್ಲಿ ಶೇಕಡಾ 2.9ರಷ್ಟು ಮತ್ತು 2019ರಲ್ಲಿ ಶೇಕಡಾ 2.5ರಷ್ಟು ಕಡಿಮೆ ಎಂದು ತೋರಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ