
ಬೆಂಗಳೂರು, ಅ.4-ಕಳೆದ ತಿಂಗಳು ನೈಸ್ ರಸ್ತೆಯಲ್ಲಿ ನಡೆದಿದ್ದ ಕಾರು ಚಾಲಕ ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಘಟ್ಟಪುರ ಪೆÇಲೀಸರು, ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ರೌಡಿ ಮಾದೇಶ, ಶ್ರೀನಾಥ್, ಸಂತೋಷ್, ಸುನೀಲ್ ಮತ್ತು ಆನಂದ್ ಬಂಧಿತ ಆರೋಪಿಗಳು.
ರೌಡಿ ಮಾದೇಶ ತನ್ನಿಬ್ಬರು ಸಹಚರರಾದ ಸುನೀಲ್ ಮತ್ತು ಆನಂದ್ ಜೊತೆ ನ್ಯಾಯಾಲಯಕ್ಕೆ ಶರಣಾಗಿದ್ದ. ಶ್ರೀನಾಥ್ ಮತ್ತು ಸಂತೋಷ್ನನ್ನು ಪೆÇಲೀಸರು ಬಂಧಿಸಿದ್ದಾರೆ.
ಹರೀಶ್ ಮತ್ತು ಮಾದೇಶ ಬಾಲ್ಯ ಸ್ನೇಹಿತರಾಗಿದ್ದರು. ಹರೀಶ್ ತನ್ನ ಅಕ್ಕನ ಜೊತೆ ಆಪ್ತ ಗೆಳೆತನ ಹೊಂದಿದ್ದರಿಂದ ಮಾದೇಶ ಕೋಪಗೊಂಡಿದ್ದ. ಕೆಲವು ದಿನಗಳ ಹಿಂದೆ ಅವರಿಬ್ಬರ ನಡುವೆ ಹಣಕಾಸು ವಿಚಾರದಲ್ಲಿಯೂ ಜಗಳವಾಗಿತ್ತು. ಈ ಎಲ್ಲಾ ಕಾರಣಗಳಿಂದ ಮಾದೇಶ ತನ್ನ ಸಹಚರರೊಂದಿಗೆ ಸೇರಿ ಸೆ.19ರಂದು ನೈಸ್ ರಸ್ತೆಯಲ್ಲಿ ಬರುತ್ತಿದ್ದ ಹರೀಶ್ನನ್ನು ತಡೆದು ನಿಲ್ಲಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಮಾದೇಶ ಹುಳಿಮಾವು ಪೆÇಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ.
ಪ್ರಕರಣ ದಾಖಲಿಸಿಕೊಂಡ ತಲಘಟ್ಟ ಪೆÇಲೀಸರು ಇದೀಗ ಐದು ಮಂದಿ ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.