ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಣಪುರ ಮೂಲದ ಯುವತಿಯ ಬಂಧನ

ಬೆಂಗಳೂರು, ಅ.4-ಮನೆಯಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಣಿಪುರ ಮೂಲದ ಯುವತಿಯೊಬ್ಬಳನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು, 3 ಲಕ್ಷ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಮಣಿಪುರದ ಸೇನಾಪತಿ ಲೇಯಿಮಕಾಂಗ್ ನಿವಾಸಿ ವಿಚಾಂಥೋನಿಲು ಅಬೋನ್‍ಮಯ್ (23) ಬಂಧಿತ ಯುವತಿ. ಈಕೆ ಬಾಣಸವಾಡಿಯ ಸುಬ್ಬಯ್ಯನ ಪಾಳ್ಯದ ಶನೇಶ್ವರ ದೇವಸ್ಥಾನ ಬೀದಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.
ಆರೋಪಿ ಯುವತಿ ಮಣಿಪುರ ಮತ್ತು ಅಸ್ಸಾಂನಿಂದ ತನ್ನ ಸಹಚರರ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಳು. ನಗರದಲ್ಲಿ ಆಕೆ ಗಿರಾಕಿಗಳ ಜಾಲವನ್ನು ಹೊಂದಿದ್ದಳು. ಪ್ರತಿ ಗ್ರಾಂಗೆ 9000 ರೂ.ಗಳಂತೆ ಅದನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಳು. ಹೆಚ್ಚಾಗಿ ಹದಿಹರೆಯದ ಯುವಕ, ಯುವತಿಯರಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.
ಈ ಬಗ್ಗೆ ಬಾಣಸವಾಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿ ವೇಳೆ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಬೆಂಗಳೂರು ನಗರ ವಿಭಾಗದ ಅಪರ ಪೆÇಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಉಪ ಪೆÇಲೀಸ್ ಆಯುಕ್ತ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಸಹಾಯಕ ಪೆÇಲೀಸ್ ಆಯುಕ್ತ ಬಿ.ಎಸ್.ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಪೆÇಲೀಸ್ ಇನ್ಸ್‍ಪೆಕ್ಟರ್‍ಗಳಾದ ಎಸ್.ಆಯಿಷಾ, ಎಎಸ್‍ಐ ಶಾಂತಾ ಶೆಟ್ಟಿ, ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ