ಹಾಸನ: ಮುಂದಿನ ದಸರಾ ಒಳಗಡೆ ಜಿಲ್ಲೆಯಲ್ಲಿ 20ಕೋಟಿ ಬಂಡವಾಳ ಹೂಡಿಕೆ ಮಾಡುವ ಯೋಜನೆಯನ್ನ ರೂಪಿಸಿದ್ದೇನೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು
ಹಾಸನ ಜಿಲ್ಲೆಯ ಹಿರೀಸಾವೆ ಹೋಬಳಿಯ ತೋಟಿ ಗ್ರಾಮದಲ್ಲಿ ಅವರು ಮಾತನಾಡಿದರು. ಚನ್ನರಾಯಪಟ್ಟಣದ ಅಮಾನಿಕೆರೆಯಿಂದ ಕುಡಿಯುವ ನೀರಿಗಾಗಿ ತಾಲೂಕಿನ 25 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸದ್ಯದಲ್ಲಿಯೇ ಹಾಸನ ಜಿಲ್ಲೆಗೆ ಬೃಹತ್ ಬಂಡವಾಳ ಹುಡಿಕೆ ಮಾಡುವ ಚಿಂತನೆ ಮಾಡಿದ್ದೇನೆ. ಇದರಿಂದ ಸುಮಾರು 10 ಸಾವಿರ ಮಂದಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಯೋಜನೆ ಇದಾಗಿದೆ. ಈ ಮೂಲಕ ನಿರುದ್ಯೋಗಿ ಯುವಜನತೆಗೆ ಸ್ಫೂರ್ತಿ ತುಂಬಿದರು. ಇಂತಹ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಗುಲ್ಬರ್ಗ ರಾಯಚೂರು, ಧಾರವಾಡಗಳಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಇನ್ನು ರಾಜಕೀಯವಾಗಿ ಮಾತನಾಡಿದ ಅವರು ದೇವರ ಕೃಪಾಶೀರ್ವಾದ ರಾಜ್ಯದ ತಾಯಂದಿರಾ ಮತ್ತು ಅಂಗವಿಕಲರುಗಳ ಆಶೀರ್ವಾದ ಇರುವ ತನಕ ಯಾವ ಬಿಜೆಪಿ ನಾಯಕರುಗಳು ಕೂಡ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ ಅಂತ ಬಿಜೆಪಿ ನಾಯಕರುಗಳಿಗೆ ತಿರುಗೇಟು ನೀಡಿದರು.
ಇನ್ನು ಬಿಜೆಪಿಯವರು ಪದೇಪದೇ ಆರ್ಥಿಕ ಇಲಾಖೆ ಹಣವನ್ನು ಸಾಲ ಮನ್ನಾ ಮಾಡುವ ಮೂಲಕ ಖರ್ಚು ಮಾಡಿ ಖಾಲಿ ಮಾಡಿದ್ದಾರೆ. ಹೀಗಾಗಿ ರಾಜ್ಯದ ಅಭಿವೃದ್ಧಿ ಮಾಡಲು ಎಲ್ಲಿದೆ ಹಣ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ ರೈತರ ಸಾಲಮನ್ನಾ ಹಾಗೂ ರಾಜ್ಯದ ಅಭಿವೃದ್ಧಿಗೆ ಯಾವುದೇ ಸಂಬಂಧ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಏನು ಮಾಡಬೇಕೆಂದು ನಾನು ಮೊದಲೇ ರೂಪಿಸಿದ್ದೇನೆ. ಇನ್ನು ನನ್ನ ನಾಯಕತ್ವದಲ್ಲಿ ರಾಜ್ಯದ ಆರ್ಥಿಕತೆ ಸುಭದ್ರವಾಗಿದೆ ಎಂದ ಅವರು ರಾಜ್ಯದ ವರದಿಗಾರರು ಕೂಡ ನನ್ನ ಪರ ಇದ್ದಾರೆ. ಆದ್ರೆ ಕೆಲ ಚಾನೆಲ್ ಮುಖ್ಯಸ್ಥರುಗಳು ವರದಿಗಳನ್ನು ತಿರುಚುತ್ತಿದ್ದಾರೆ. ಈಗ ಸರ್ಕಾರ ಬೀಳಬಹುದು, ನಾಳೆ ಬೀಳಬಹುದು ಎಂದು ಪ್ರಚಾರ ಮಾಡುತ್ತಿದ್ದಾರೆ. ಅಂತಹುಗಳಿಗೆ ಕಿವಿಗೊಡದೇ ನೈಜ ಸುದ್ದಿ ಅತ್ತ ಗಮನ ಹರಿಸಿ ಅಂತ ಕಿವಿಮಾತನ್ನ ಹೇಳಿದ್ರು. ಅಲ್ಲದೆ ಮಾಧ್ಯಮಗಳಿಗೆ ಕೊಟ್ಟ ಹೇಳಿಕೆಯನ್ನೇ ವೇದಿಕೆಯ ಭಾಷಣದಲ್ಲಿ ಮುಂದುವರಿಸಿದ ಕುಮಾರಸ್ವಾಮಿ ಬಿಜೆಪಿ ನಾಯಕರುಗಳು ನಮ್ಮ ಶಾಸಕರುಗಳನ್ನು ಸೆಳೆಯುವ ಪ್ರಯತ್ನ ಮಾಡಿ, ಮುಂಬೈ, ದೆಹಲಿಗೆ ಅಂತ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಗಳು ಮುಂದುವರಿದರೆ ನಮ್ಮ ಕಾರ್ಯಕರ್ತರುಗಳ ಮೂಲಕ ಬಿಜೆಪಿ ನಾಯಕರ ವಿರುದ್ಧ ದಂಗೆ ಎಬ್ಬಿಸುವ ಕಾರ್ಯವನ್ನು ನಾನು ಮಾಡಬೇಕಾಗುತ್ತದೆ ಎಂದು ವೇದಿಕೆಯಲ್ಲಿ ಗುಡುಗಿದರು.
ಬಳಿಕ ಮತ್ತೆ ಸಾಲ ಮನ್ನಾದ ಬಗ್ಗೆ ಪ್ರಸ್ತಾಪಿಸಿದ ಸಿಎಂ ಕುಮಾರಸ್ವಾಮಿ ಈಗಾಗಲೇ ಎಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿರುವ 9450 ಕೋಟಿ ಸಾಲ ಮನ್ನ ಮಾಡಿದ್ದು, ಹಾಸನ ಜಿಲ್ಲೆಯ ಒಂದರಲ್ಲಿ ಗೆ ಸುಮಾರು 170 ಕೋಟಿ ಸಾಲ ಮನವಾಗಿದೆ ಅಂತ ಹೇಳಿದ್ರು. ಹಾಗೇ ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಘೋಷಣೆ ಮಾಡಿದ್ದ ಸಾಲದ ಉಳಿದ ಮೊತ್ತವನ್ನು ಕೂಡ ಮನ್ನ ಮಾಡಲು ನಿರ್ಧರಿಸಿದ್ದೇವೆ.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರು ಪಡೆದಿರುವ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ್ದು, ವರದಿ ಬಂದ ಬಳಿಕ ಮುಂದಿನ ದಿನಗಳಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೇನೆ. ರಾಜ್ಯದ ಜನತೆಗೆ ನಾನು ಒಂದು ಮನವಿ ಮಾಡುತ್ತೇನೆ. ನಮ್ಮ ಸರ್ಕಾರದ ಮೇಲೆ ವಿಶ್ವಾಸವನ್ನು ಇಡಿ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಕೆಲಸವನ್ನು ಮಾಡುತ್ತೇವೆ ಎಂದರು.
ಇದಲ್ಲದೆ ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ಸಾಕಷ್ಟು ಒತ್ತು ನೀಡುತ್ತಿದೆ ಈಗಾಗಲೇ ನುಸಿ ರೋಗದಿಂದ ಹಾಳಾಗಿರುವ ತೆಂಗಿನ ಮರಗಳಿಗೆ ಪ್ರತಿ ಎಕರೆಯಲ್ಲಿ ಹಾಳಾಗಿರುವ 40 ಮರಗಳಿಗೆ 20 ಸಾವಿರ ಪರಿಹಾರ ನೀಡಲು ನಿರ್ಧರಿಸಿದ್ದೇನೆ. ಇಂತಹ ಯೋಜನೆ ದೇಶದಲ್ಲಿಯೇ ಮೊದಲಾಗಿದೆ. ಹಾಗಾಗಿ ನಮ್ಮ ಕೆಲಸವನ್ನು ಮಾಡಲು ಅವಕಾಶ ಮಾಡಿಕೊಡಿ. ಗಾಳಿಸುದ್ದಿಗಳಿಗೆ ಕಿವಿಗೊಡದೆ ನನ್ನ ಮೇಲೆ ವಿಶ್ವಾಸ ಬಿಡಿ ಅಂತ ಪುನರುಚ್ಚಾರ ಮಾಡಿದರು.
ಇದಕ್ಕೂ ಮೊದಲು ಮಾತನಾಡಿದ ಸ್ಥಳೀಯ ಶಾಸಕ ಸಿಎನ್ ಬಾಲಕೃಷ್ಣ ಇದು ನನ್ನ ಜೀವನದಲ್ಲಿ ಇದು ಸುದಿನ ನಾನು ಎರಡು ಬಾರಿ ಚುನಾವಣೆಗೆ ಇದ್ದಾಗಲೂ ಕೂಡ ಇಷ್ಟೊಂದು ಸಂಭ್ರಮಿಸಿ ರಲಿಲ್ಲ ಕಳೆದ 20 ವರ್ಷಗಳಿಂದ ನೋ ಕೂಡ ನೆನೆ ಗುತ್ತಿಗೆ ಬಿದ್ದಂತಹ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಚನ್ನರಾಯಪಟ್ಟಣದ ಅಮಾನಿಕೆರೆ ಯಿಂದ ಮಂಗಳೂರಿನ ಓಶಿಯನ್ ಕಂಪನಿಯ ಮೂಲಕ ಚರಿತ ಗತಿಯಲ್ಲಿ ದಿನ ವರ್ಷದೊಳಗೆ ಏತ ನೀರಾವರಿಯನ್ನು ಪೂರ್ಣಗೊಳಿಸುವ ಕಾರ್ಯ ಮಾಡಲಾಗುವುದು ಇದರಿಂದ ತೋಟಿ ಭಾಗದ ಸುಮಾರು 26 ಕೆರೆಗಳಿಗೆ ಜೀವ ಸೆಲೆ ಬರುತ್ತದೆ ರೈತರ ಸಂಕಷ್ಟಗಳು ಕೂಡ ಬಗೆಹರಿಯುತ್ತದೆ ಹಾಗಾಗಿ ಇಂತಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜೊತೆ ನಾನು ಭಾಗವಹಿಸಿರುವುದು ತುಂಬಾ ಖುಷಿಯಾಗುತ್ತಿದೆ. ಬಾಗೂರು ನವಿಲೆ ಸುರಂಗ ಒಡಲನ್ನ ಬಗೆದು ತುಮಕೂರು ಭಾಗಗಳಿಗೆ ನೀರನ್ನು ನೀಡಿದ್ದೇವೆ ಅದೇ ರೀತಿ ಬಾಗುರು ನವಿಲೆ ಸುರಂಗದ ನಿರ್ಗಮನದಿಂದ ನೀರನ್ನು ಏತ ನೀರಾವರಿ ಮೂಲಕ ಕುಡಿಯುವ ನೀರಿಗಾಗಿ ಚನ್ನರಾಯಪಟ್ಟಣ ತಾಲೂಕಿನ ಹಾಗೂ ಸುತ್ತಮುತ್ತಲಿನ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯನ್ನು ಕೂಡ ಮಾಡಲಾಗುವುದು ಎಂದರು.