ಬೆಂಗಳೂರು: ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಾಲ್ ಸಂಸ್ಥೆಯ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬೆಂಗಳೂರು ನಗರದ ನ್ಯಾಯಾಲಯವೊಂದರಲ್ಲಿ ಅವರು ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ವಿರುದ್ಧ ಕೇವಿಯಟ್ ಸಲ್ಲಿಸಿದ್ದಾರೆ.
ದೇಶದ ಎರಡನೆಯ ಅತಿ ದೊಡ್ಡ ಐಟಿ ಕಂಪೆನಿಯು ಟ್ರಿಬ್ಯೂನಲ್ ಆದೇಶದ ಮೇರೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಮಂಗಳವಾರ ಕೇವಿಯಟ್ ಅರ್ಜಿ ಸಲ್ಲಿಕೆಯಾಗಿದೆ.ಎಂದು ಬನ್ಸಾಲ್ ಅವರ ಇಂಡಸ್ ಲಾ ಸಂಸ್ಥೆಯ ಪ್ರತಿನಿಧಿಪಿಟಿಐಗೆ ತಿಳಿಸಿದ್ದಾರೆ.
ಈ ಕೇವಿಯಟ್ ಅರ್ಜಿ ಬನ್ಸಾಲ್ ಅವರ ಹಿತಾಸಕ್ತಿಯನ್ನು ಕಾಪಾಡಲಿದ್ದು ಇನ್ಫೋಸಿಸ್ ಪ್ರಾರಂಭಿಸಲಿದೆ ಎಂದು ನಿರೀಕ್ಷೆ ಇರುವ ಯಾವುದೇ ಮೊಕದ್ದಮೆಯನ್ನು ಬನ್ಸಾಲ್ ಅವರ ಅನುಮತಿ ಇಲ್ಲದೆ ಮುಂದುವರಿಸುವುದುಅನ್ನಿ ಇದು ತಡೆಯಲಿದೆ.
ಮಂಗಳವಾರ ಈ ಕುರುತು ಹೇಳಿಕೆ ನೀಡಿದ್ದ ಇನ್ಬೊಸಿಸ್ ಇದಾಗಲೇ ಬನ್ಸಾಲಿ ತಮ್ಮ ಮಧ್ಯೆ ಇದ್ದ ಪ್ಯಾಕೇಜ್ ಒಡಬ್ಂಡಿಕೆ ರದ್ದಾಗಿದೆ ಎಂದು ಹೇಳಿದೆ.
2015 ರಲ್ಲಿ ಬನ್ಸಾಲ್ ಕಂಪನಿಯನ್ನು ತೊರೆದಾಗ 17.38 ಕೋಟಿ ಅಥವಾ 24 ತಿಂಗಳುಗಳ ವೇತನವನ್ನು ಪಾವತಿಸಲು ಒಪ್ಪಿಕೊಳ್ಳಲಾಗಿತ್ತು ಆದರೆ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಇತರರು ಈ ಪ್ಯಾಕೇಜ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತದನಂತರ ಬನ್ಸಾಲ್ ತಾವು ಈ ಮುನ್ನ ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಮಧ್ಯಸ್ಥಿಕೆ ವ್ಯವಹಾರಕ್ಕೆ ಎಳೆದು ತಂದದ್ದಲ್ಲದೆ ಬಾಕಿ ಮೊತ್ತ ಕೊಡುವಂತೆ ಆಗ್ರಹಿಸಿದ್ದರು.
ಸಧ್ಯ ಈ ಕೇವಿಯಟ್ ಗೆ 90 ದಿನಗಳ ಕಾಲ ವಾಯ್ದೆ ಇದ್ದು ಈ ಅವಧಿಯಲ್ಲಿ ಯಾವುದೇ ಪಕ್ಷವು ಎದುರಾಳಿ ಪಕ್ಷದಿಂದ ಮೊಕದ್ದಮೆ ಸಲ್ಲಿಕೆಯಾದರೆ ಈಗ ಕೇವಿಯಟ್ ಹೊಂದಿದವರು ಮತ್ತೆ ಹೊಸ ಕೇವಿಯಟ್ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.