ಬೆಂಗಳೂರು, ಸೆ.11- ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘ-ಸಂಸ್ಥೆಗಳಿಗೆ ಅನುಮತಿ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಏಕಗವಾಕ್ಷಿ ಯೋಜನೆ ಇಂದಿನಿಂದ ಜಾರಿಗೆ ಬಂದಿದೆ.
ಪಾಲಿಕೆ ಅಧಿಕಾರಿಗಳು, ಪೆÇಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ಬೆಳಗ್ಗೆ 9 ರಿಂದ ರಾತ್ರಿ 11 ಗಂಟೆವರೆಗೂ ಏಕಗವಾಕ್ಷಿ ಯೋಜನೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಯಾವುದೇ ತೊಂದರೆಯಾಗದಂತೆ ಎಲ್ಲ ಎಂಟು ವಲಯಗಳಲ್ಲಿ ಏಕಗವಾಕ್ಷಿ ಯೋಜನೆ ಕಚೇರಿ ತೆರೆಯಲಾಗಿದ್ದು, ಸಂಬಂಧಪಟ್ಟ ಇಲಾಖೆಯ ಒಬ್ಬೊಬ್ಬ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಪೂರ್ವ ವಲಯ: ಶಿವಾಜಿನಗರ, ದೊಮ್ಮಲೂರು, ಶಾಂತಿನಗರ, ಜೆಪಿ ನಗರ, ವಸಂತನಗರ, ಸಿವಿ ರಾಮನ್ನಗರ, ಮಾರುತಿ ಸೇವಾ ನಗರ, ಕೆಜಿ ಹಳ್ಳಿ, ಪುಲಿಕೇಶಿನಗರ, ಜೆಸಿ ನಗರ, ಹೆಬ್ಬಾಳ, ಎಚ್ಬಿಆರ್ ಬಡಾವಣೆಯ ಎಇಇ ಕಚೇರಿಗಳಲ್ಲಿ ಏಕಗವಾಕ್ಷಿ ಯೋಜನೆ ಕಚೇರಿ ತೆರೆಯಲಾಗಿದೆ.
ಪಶ್ಚಿಮ ವಲಯ: ಗೋವಿಂದರಾಜನಗರ, ಮಲ್ಲೇಶ್ವರಂ, ನಾಗ್ಪುರ, ಚಂದ್ರಾ ಲೇಔಟ್, ರಾಜಾಜಿನಗರ, ಶ್ರೀರಾಮಮಂದಿರ, ಗಾಂಧಿನಗರ, ಮಹಾಲಕ್ಷ್ಮಿಪುರ, ಕಾಟನ್ಪೇಟೆ, ಮತ್ತಿಕೆರೆ, ಜೆಜೆ ನಗರ, ಚಾಮರಾಜಪೇಟೆ ಎಇಇ ಕಚೇರಿಗಳಲ್ಲಿ.
ದಕ್ಷಿಣ ವಲಯ: ವಿಜಯನಗರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಗಿರಿನಗರ, ಪದ್ಮನಾಭನಗರ, ಬನಶಂಕರಿ, ಜಯನಗರ, ಕೆಂಪೇಗೌಡ ನಗರ, ಬಿಟಿಎಂ ಬಡಾವಣೆ, ಹೊಂಬೇಗೌಡ ನಗರ, ಕೋರಮಂಗಲ, ಜೆಪಿ ನಗರ.
ಬೊಮ್ಮನಹಳ್ಳಿ ವಲಯ: ಅಂಜನಾಪುರ, ಬೊಮ್ಮನಹಳ್ಳಿ, ಉತ್ತರಹಳ್ಳಿ, ಬೇಗೂರು, ಅರಕೆರೆ, ಎಚ್ಎಸ್ಆರ್ ಲೇಔಟ್.
ಮಹದೇವಪುರ ವಲಯ: ಹೂಡಿ, ವೈಟ್ಫೀಲ್ಡ್, ಮಾರತ್ತಹಳ್ಳಿ, ಕೆಆರ್ ಪುರ, ಹೊರಮಾವು.
ದಾಸರಹಳ್ಳಿ ವಲಯ: ಶೆಟ್ಟಿಹಳ್ಳಿ, ದಾಸರಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಹೆಗ್ಗನಹಳ್ಳಿ.
ಆರ್ಆರ್ ನಗರ ವಲಯ: ಆರ್ಆರ್ ನಗರ, ಲಗ್ಗೆರೆ, ಗೊರಗುಂಟೆ ಪಾಳ್ಯ, ಯಶವಂತಪುರ, ಕೆಂಗೇರಿ, ಹೇರೋಹಳ್ಳಿ.
ಯಲಹಂಕ ವಲಯ: ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಯಲಹಂಕ ಉಪನಗರ, ಯಲಹಂಕ, ಬ್ಯಾಟರಾಯನಪುರ ಎಇಇ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಗಣೇಶ ಪ್ರತಿಷ್ಠಾಪನೆಗೆ ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳಬಹುದಾಗಿದೆ ಎಂದು ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪನೆಗೆ ಮನವಿ: ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆ-ಬಾವಿಗಳು ಕಲುಷಿತಗೊಳ್ಳದಂತೆ ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗಣೇಶಮೂರ್ತಿ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ನಿಗದಿಪಡಿಸಿದ ಸ್ಥಳಗಳಲ್ಲೇ ಗಣೇಶಮೂರ್ತಿಗಳನ್ನು ವಿಸರ್ಜಿಸಬೇಕು. ಪರಿಸರ ಕಾಪಾಡುವ ಹೊಣೆ ನಮ್ಮೆಲ್ಲರ ಮೇಲೆ ಇರುವುದರಿಂದ ಸಾರ್ವಜನಿಕರು ಪರಿಸರ ಹಾನಿಕಾರಕ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಬದಲು ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕೆಂದು ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.
ಗಣೇಶಮೂರ್ತಿ ವಿಸರ್ಜನೆಗೆ ಪಾಲಿಕೆ ಸಜ್ಜು: ಗಣೇಶ ಚತುರ್ಥಿ ಸಡಗರಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಣೇಶಮೂರ್ತಿಗಳ ವಿಸರ್ಜನೆಗೆ ಪಾಲಿಕೆ ಸಜ್ಜಾಗಿದೆ.
ನಗರದಲ್ಲಿರುವ ಸ್ಯಾಂಕಿ, ಹಲಸೂರು, ಯಡಿಯೂರು ಕೆರೆಗಳಲ್ಲದೆ ಇತರೆ 22 ಕೆರೆಗಳಲ್ಲಿ ಗಣೇಶಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಕೆಲ ಜನವಸತಿ ಪ್ರದೇಶಗಳು ಕೆರೆಗಳಿಂದ ದೂರವಿರುವ ಹಿನ್ನೆಲೆಯಲ್ಲಿ ಚಿಕ್ಕ ಚಿಕ್ಕ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಆಯಾ ವಲಯಗಳ ಪ್ರಮುಖ 282 ಸ್ಥಳಗಳಲ್ಲಿ ಬಿಬಿಎಂಪಿಯಿಂದ ಮೊಬೈಲ್ ಟ್ಯಾಂಕ್ಗಳನ್ನು ತೆರೆಯಲಾಗುತ್ತಿದೆ. ಅದೇ ರೀತಿ 32 ಸ್ಥಳಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಸಂಚಾರಿ ವಿಸರ್ಜನಾ ಘಟಕ ಹಾಗೂ 63 ತಾತ್ಕಾಲಿಕ ಟ್ಯಾಂಕ್ಗಳನ್ನು ಸ್ಥಾಪಿಸಿದೆ.
ಗಣೇಶಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಿರುವ ಕೆರೆಗಳ ಸಮೀಪ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಕೇಂದ್ರಗಳಲ್ಲೂ ಮೂರು ಪಾಳಿಯಲ್ಲಿ ನುರಿತ 10 ಮಂದಿ ಈಜುಗಾರರು ಹಾಗೂ ಸಿಬ್ಬಂದಿ ವರ್ಗದವರನ್ನು ನಿಯೋಜಿಸಲಾಗಿದೆ.
ಕೆರೆಗಳಲ್ಲಿ ಕೇವಲ ಗಣೇಶಮೂರ್ತಿ ವಿಸರ್ಜನೆಗೆ ಮಾತ್ರ ಅವಕಾಶವಿದ್ದು, ವಿಗ್ರಹದ ಮೇಲಿನ ಪೂಜಾ ಸಾಮಗ್ರಿಗಳನ್ನು ತೆಗೆದು ಕಂಟೈನರ್ಗಳಿಗೆ ತುಂಬಿಸುವ ಹೊಣೆಯನ್ನು ಎಂಜಿನಿಯರ್ಗಳಿಗೆ ನೀಡಲಾಗಿದೆ. ಸಂಗ್ರಹವಾಗುವ ತ್ಯಾಜ್ಯವನ್ನು ಸಾಗಿಸಲು ಅಗತ್ಯ ಪೌರ ಕಾರ್ಮಿಕರು ಹಾಗೂ ಲಾರಿಗಳನ್ನು ಸಜ್ಜುಗೊಳಿಸಲಾಗಿದೆ.
ದೊಡ್ಡ ಗಣೇಶಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ದೋಣಿ ಹಾಗೂ ಕ್ರೇನ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಸಿಡಿಮದ್ದು ಸಿಡಿಸುವಂತಿಲ್ಲ, ಧ್ವನಿವರ್ಧಕ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾತ್ರಿ 11 ಗಂಟೆ ನಂತರ ಗಣೇಶಮೂರ್ತಿ ವಿಸರ್ಜನೆಗೆ ಅವಕಾಶವಿರುವುದಿಲ್ಲ.
ಸಂಪರ್ಕಿಸಿ: ಗಣೇಶಮೂರ್ತಿ ಪ್ರತಿಷ್ಠಾಪನೆಗೆ ನಿರಾಪೇಕ್ಷಣಾ ಪಡೆಯುವ ಏಕಗವಾಕ್ಷಿ ಕಚೇರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ಆಯಾ ವಲಯಗಳ ಶಾಶ್ವತ ನಿಯಂತ್ರಣಾ ಕೊಠಡಿಗಳನ್ನು ಸಂಪರ್ಕಿಸಬಹುದಾಗಿದೆ.
ಪೂರ್ವ: 080-22975803/22975502, ಪಶ್ಚಿಮ: 080-23463366/23561692, ದಕ್ಷಿಣ: 080-26566362/22975703, ಬೊಮ್ಮನಹಳ್ಳಿ: 9663667581/9739548414, ಮಹದೇವಪುರ: 080-28512300/28512301, ದಾಸರಹಳ್ಳಿ: 080-28394909/28393688, ಆರ್ಆರ್ ನಗರ: 080-28600954/28604331, ಯಲಹಂಕ: 080-22975936/23636671, ಐಪಿಪಿ: 080-22660000, ಕೇಂದ್ರ ಕಚೇರಿ: 080-22221188/22224748.