ಭಾರತೀಯ ದಂಡ ಸಂಹಿತೆ-377ರ ವಿರುದ್ಧ ಸುಪ್ರೀಂ ತೀರ್ಪನ್ನು ಅನುಷ್ಠಾನಗೊಳಿಸಲು ಒತ್ತಾಯ

ಬೆಂಗಳೂರು, ಸೆ.11- ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಿದ್ದ ಭಾರತೀಯ ದಂಡ ಸಂಹಿತೆ-377ರ ವಿರುದ್ಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒಂದೆಡೆ ಘನತೆ, ಧ್ವನಿ, ಲೈಂಗಿಕತೆ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖ್ಯಸ್ಥೆ ಡಾ.ಅಕ್ಕೈ ಪದ್ಮಶಾಲಿ ಮಾತನಾಡಿ, ಐಪಿಸಿ 377ರ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಈ ತೀರ್ಪು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸಂವಿಧಾನಾತ್ಮಕ ರಕ್ಷಣೆ ಮತ್ತು ಪೌರ ಹಕ್ಕುಗಳನ್ನು ನೀಡಲಿದೆ ಎಂದರು.
ಈ ತೀರ್ಪಿನಿಂದ ಸಂವಿಧಾನದ ಎಲ್ಲ ಪ್ರಜೆಗಳಿಗೆ ನೀಡಿರುವ ಹಕ್ಕುಗಳನ್ನು ಮರಳಿ ನೀಡಿದಂತಾಗಿದೆ. ಪ್ರತಿ ಮನುಷ್ಯರಿಗೆ ಸ್ವತಂತ್ರ, ಸ್ವಾಯತ್ತತೆ, ಘನತೆ ಒದಗಿಸಲಿದೆ. ಐಪಿಸಿ ಸೆಕ್ಷನ್ 377ರಲ್ಲಿ ವ್ಯವಸ್ಥಿತ ತಾರತಮ್ಯ ಪ್ರಮುಖವಾಗಿದ್ದು, ಈ ತೀರ್ಪು ಇಂತಹ ಭೇದ ನೀತಿಗೆ ಅಂತ್ಯ ಹಾಡಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ