ಶೋಷಣೆಗಳ ಬಗ್ಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು: ಡಿ.ಎಸ್.ವೀರಯ್ಯ

ಬೆಂಗಳೂರು, ಸೆ.9- ಇತ್ತೀಚಿನ ದಿನಗಳಲ್ಲಿ ಶೋಷಣೆ ಮಿತಿ ಮೀರಿದ್ದು, ಪ್ರತಿನಿತ್ಯ ಬಗೆಬಗೆಯ ಶೋಷಣೆಗಳು, ಮೋಸ, ವಂಚನೆಗಳು ನಡೆಯುತ್ತಲೇ ಇವೆ. ಇದರ ಬಗ್ಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಹೇಳಿದರು.
ನಗರದ ಸೆಂಚುರಿ ಕ್ಲಬ್‍ನಲ್ಲಿ ಗ್ರಾಹಕರ ಹಕ್ಕು ಸಂಸ್ಥೆ ಆಯೋಜಿಸಿದ್ದ ರಾಜ್ಯ ಮತ್ತು ಜಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಿಯವರೆಗೂ ಶೋಷಣೆ ಮತ್ತು ಮೋಸಕ್ಕೆ ಒಳಗಾಗುವವರು ಇರುತ್ತಾರೋ ಅಲ್ಲಿಯವರೆಗೂ ಇಂತಹ ಶೋಷಣೆಗಳು ನಡೆಯುತ್ತಲೆ ಇರುತ್ತವೆ ಎಂದರು.

ಸೆಮಿನಾರ್‍ನಂತಹ ವಿವಿಧ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಅರಿವು ಮೂಡಿಸಬೇಕು. ಇಂತಹ ಸಂಸ್ಥೆಯನ್ನು ಬಲಿಷ್ಠಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಬಡವರು ಮತ್ತು ಮಧ್ಯಮವರ್ಗದವರು ಹೆಚ್ಚಿನ ರೀತಿಯಲ್ಲಿ ಮೋಸ, ವಂಚನೆ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆ. ಇವುಗಳನ್ನು ಎದುರಿಸಿ ಗ್ರಾಹಕರು ಹೋರಾಡುವಂತೆ ಮತ್ತು ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕಿದೆ ಎಂದರು.
ಮೋಸ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಇದೇ ವೇಳೆ ವೀರಯ್ಯ ಹೇಳಿದರು.
ಶಾಸಕ ಉದಯ್ ಬಿ ಗರುಡಾಚಾರ್, ನಿವೃತ್ತ ಪೆÇಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ, ಸಂಸ್ಥೆಯ ರಾಷ್ಟ್ರಾಧ್ಯಕ್ಷ ನವೀನ್ ಅಗರ್‍ವಾಲ್, ಉಪಾಧ್ಯಕ್ಷರಾದ ಉಷಾದಾನಿ, ಕಾರ್ಯದರ್ಶಿ ಪೂರ್ಣಿಮಾದತ್, ಸಂಸ್ಥೆಯ ರಾಜ್ಯಾಧ್ಯಕ್ಷ ಕೆ.ಆರ್.ಚಂದ್ರಕಾಂತ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ